ವಿದ್ಯುತ್ ತಗುಲಿ ಮಹಿಳೆ ಸಾವು

ಬೆಂಗಳೂರು : ಮನೆಯ ಹೊರಭಾಗವನ್ನು ಕಂಬಿ ಹಿಡಿದುಕೊಂಡು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ವಿದ್ಯುತ್‌ ತಂತಿ ತಗುಲಿ ಗೃಹಿಣಿಯೊಬ್ಬರು ಮೃತಪಟ್ಟಿದ್ದಾರೆ.

ಕಟ್ಟಡದ ಮೊದಲ ಮಹಡಿಯಲ್ಲಿ ನೆಲೆಸಿದ್ದ ಗಾಯಿತ್ರಿ ಅವರು, ಹೊರ ಭಾಗದಲ್ಲಿ ಕಬ್ಬಿಣ ಕಂಬಿಗೆ ಬಟ್ಟೆ ಸುತ್ತಿಕೊಂಡು ಸ್ವಚ್ಛಗೊಳಿಸುತ್ತಿದ್ದರು. ಆಗ ಮಹಡಿ ಸಮೀಪದಲ್ಲೇ ಇರುವ ವಿದ್ಯುತ್‌ ಕಂಬಕ್ಕೆ ಆಕಸ್ಮಿಕವಾಗಿ ಕಂಬಿ ತಾಗಿದ ಕಾರಣ ಗಾಯಿತ್ರಿ ಅವರಲ್ಲಿ ವಿದ್ಯುತ್‌ ಪ್ರವಹಿಸಿದೆ.

ಕೆ.ಆರ್‌.ಪುರ ಪ್ರಿಯಾಂಕ ನಗರದ ನಿವಾಸಿ ಕ್ಯಾಬ್‌ ಚಾಲಕ ಮಂಜುನಾಥ ಎಂಬುವರ ಪತ್ನಿ ಗಾಯತ್ರಿ(26) ಮೃತರು. ಕಟ್ಟಡದ ಮೊದಲ ಮಹಡಿಯಲ್ಲಿ ನೆಲೆಸಿದ್ದ ಗಾಯಿತ್ರಿ ಅವರು, ಹೊರ ಭಾಗದಲ್ಲಿ ಕಬ್ಬಿಣ ಕಂಬಿಗೆ ಬಟ್ಟೆ ಸುತ್ತಿಕೊಂಡು ಸ್ವಚ್ಛಗೊಳಿಸುತ್ತಿದ್ದರು. ಆಗ ಮಹಡಿ ಸಮೀಪದಲ್ಲೇ ಇರುವ ವಿದ್ಯುತ್‌ ಕಂಬಕ್ಕೆ ಆಕಸ್ಮಿಕವಾಗಿ ಕಂಬಿ ತಾಗಿದ ಕಾರಣ ಗಾಯಿತ್ರಿ ಅವರಲ್ಲಿ ವಿದ್ಯುತ್‌ ಪ್ರವಹಿಸಿದೆ. ಕೂಡಲೇ ಅವರನ್ನು ಕುಟುಂಬ ಸದಸ್ಯರು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಗಾಯಿತ್ರಿ ಕೊನೆಯುಸಿರೆಳೆದಿದ್ದಾಳೆಂದು ತಿಳಿದು ಬಂದಿದೆ.

ಕೆಲಸದ ಮೇಲೆ ಪತಿ ಮನೆಯಿಂದ ಹೊರಗೆ ತೆರಳಿದ್ದಾಗ ದುರಂತ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕೆ.ಆರ್‌.ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.