ನಡುಗಡ್ಡೆಯಾದ ಗ್ರಾಮಗಳು. 400 ಮನೆಗಳಿರುವ ಗ್ರಾಮಕ್ಕೆ ಜಲ ಕಂಟಕ

ರಾಯಬಾಗ : ಕೃಷ್ಣಾ ನದಿಯಯಲ್ಲಿ ಅಪಾಯಮಟ್ಟ ಮೀರಿ ನೀರು ಹರಿದು ಬರುತ್ತಿರುವುದರಿಂದ ತಾಲೂಕಿನ ಎರಡು ಗ್ರಾಮಗಳು ನಡುಗಡ್ಡೆಯಾಗಿದ್ದು, ಸುಮಾರು 400 ಮನೆಗಳಿರುವ ಗ್ರಾಮಕ್ಕೆ ಈಗ ಜಲ ಕಂಟಕ ಎದುರಾಗಿದೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖೇಮಲಾಪೂರ ಹಾಗೂ ಸಿದ್ದಾಪೂರ ಗ್ರಾಮಗಳು ಸಂಪೂರ್ಣ ನೀರಾಮಯಿಯಾಗಿ, ಎರಡು ಗ್ರಾಮಗಳ ನಡುವೆ ಸಂಪರ್ಕ ಕಳೆದುಕೊಂಡಿವೆ. ತಾಲೂಕಾ ಆಡಳಿತ ಮತ್ತು ಪೊಲೀಸರು ಗ್ರಾಮದಲ್ಲಿ ಸಿಲುಕಿದ ಜನರನ್ನು ಬೋಟುಗಳ ಮೂಲಕ ಸ್ಥಳಾಂತರ ಮಾಡಲು ಹರಸಾಹಸ ಪಡುತ್ತಿದ್ದಾರೆ.

ಸುಮಾರು 70 ಕ್ಕೂ ಹೆಚ್ಚು ಜನ ಗ್ರಾಮಗಳಲ್ಲಿ ಇನ್ನೂ ಸಿಲುಕಿಕೊಂಡಿದ್ದು, ಅವರನ್ನೂ ಕೂಡಾ ಸ್ಥಳಾಂತರಿಸುವ ಕಾರ್ಯ ಭರದಿಂದ ಸಾಗಿದೆ.

ವರದಿ : ಆನಂದ