ಶ್ರೀ ಮಡಿವಾಳಯ್ಯ ಸ್ವಾಮಿಗಳ 37ನೇ ಪುಣ್ಯಸ್ಮರಣೆ. ಆ.8 ರಂದು ಬೃಹತ್ ರಕ್ತದಾನ ಶಿಬಿರ

ಸೇಡಂ :  ಶರಣರ ನಾಡು ಕಲಬುರಗಿಯಲ್ಲಿ ಅಕ್ಷರ, ಅನ್ನದಾಸೋಹಕ್ಕೆ ನಾಂದಿ ಹಾಡಿದ ಸಂತ, ಆರಾಧ್ಯಧೈವ ಪರಮಪೂಜ್ಯ ಶ್ರೀ ಮಡಿವಾಳಯ್ಯ ಸ್ವಾಮಿಗಳ 37ನೇ ಪುಣ್ಯಸ್ಮರಣೆಯ ಪ್ರಯುಕ್ತವಾಗಿ ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಪಟ್ಟಣದ ಶ್ರೀ ಕೊತ್ತಲ ಬಸವೇಶ್ವರ ದೇವಾಲಯ ಆವರಣದಲ್ಲಿರುವ ಚಿರಾಯು ಆಸ್ಪತ್ರೆಯಲ್ಲಿ ಆಗಸ್ಟ್ 8 ರಂದು ಮುಂಜಾನೆ 9 ಗಂಟೆಗೆ ರಕ್ತದಾನ ಶಿಬಿರ ಜರುಗಲಿದ್ದು, ನೂರಾರು ಜನರು ರಕ್ತಧಾನ ಮಾಡಲಿದ್ದಾರೆ. ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ಭಾನುವಾರ ಮದ್ಯಾಹ್ನ ನಡೆದ ಪೂರ್ವ ಭಾವಿ ಸಭೆಯಲ್ಲಿ ಪ್ರಮುಖರು ಮನವಿ ಮಾಡಿಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ ಶ್ರೀ ಕೊತ್ತಲ ಬಸವೇಶ್ವರ ಸಂಸ್ಥಾನದ ಸದಾಶಿವ ದೇವರು ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಚಿರಾಯು ಆಸ್ಪತ್ರೆಯ ವೈದ್ಯರಾದ ಮಂಜುನಾಥ ದೋಶೆಟ್ಟಿ, ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಸದಾಶಿವ ಬೂದಿ, ಲಯನ್ಸ್ ಕ್ಲಬ್ ಅಧ್ಯಕ್ಷ ಡಾಕ್ಟರ್ ಶ್ರೀನಿವಾಸ್ ರೆಡ್ಡಿ ಕುಲ್ಕುಂದ, ಬಜರಂಗದಳ ಜಿಲ್ಲಾ ಸಂಯೋಜಕ ಪ್ರೇಮ ಚೌಹಾಣ್, ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಅನಿಲ್ ರೆಡ್ಡಿ ಸಂಗಮಪಲ್ಲಿ ಸೇರಿದಂತೆ ಇನ್ನೀತರ ಮುಖಂಡರುಗಳು ಬಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ