ಚಲಿಸುತ್ತಿದ್ದ ರೈಲ್ ನಿಂದ ಸ್ಟಂಟ್ ಮಾಡಿ ಪೊಲೀಸರ  ಅತಿಥಿಯಾದ ಭೂಪರು

ಮುಂಬೈ : ಚಲಿಸುತ್ತಿದ್ದ ರೈಲಿನಲ್ಲಿ ಯುವಕರಿಬ್ಬರು‌ ಅಪಾಯಕಾರಿ ಸ್ಟಂಟ್ ಮಾಡಿ ಸಿಕ್ಕಿ ಬಿದ್ದು ಪೊಲೀಸರ ಅತಿಥಿಯಾದ ಘಟನೆಯೊಂದು ನಡೆದಿದೆ.

ಚೆಂಬೂರ್‌ನಿಂದ ವಡಾಲಾಗೆ ಮುಂಬೈ ಲೋಕಲ್ ಟ್ರೇನ್‌ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದರು. ಕುರ್ಲಾ ಸ್ಟೇಷನ್‌ನಲ್ಲಿ ಇದನ್ನು ಗಮನಿಸಿದ ಪೊಲೀಸರು ವಿಡಿಯೋ ಮಾಡಿಕೊಂಡಿದ್ದು, ಯುವಕರನ್ನು ವಶಕ್ಕೆ ಪಡೆದಾಗ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದುದೂ ಬಹಿರಂಗವಾಗಿತ್ತು.

ಇವರಿಬ್ಬರ ವಿರುದ್ಧ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.