ಸಿದ್ದಾಪುರ : 25 ಕುಟುಂಬಗಳ ನಿರಾಶ್ರಿತ  ಕೇಂದ್ರಕ್ಕೆ ಸ್ಥಳಾಂತರ

ಸಿದ್ದಾಪುರ : ಧಾರಾಕಾರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ಕಾವೇರಿ ನದಿ ಉಕ್ಕಿ ಹರಿದು ಕರಡಿಗೋಡು ಬೆಟ್ಟ ಸೇರಿದಂತೆ ಹಲವು ನದಿ ದಡ ಗ್ರಾಮಗಳು ಜಲಾವೃತಗೊಂಡಿದ್ದು, ಸುಮಾರು ಇಪ್ಪತ್ತೈದು ಕ್ಕೊ ಹೆಚ್ಚು  ಕುಟುಂಬಗಳನ್ನು ನಿರಾಶ್ರಿತ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಬೆಟ್ಟದ ಕಾಡು, ಕರಡಿಗೋಡು  ಗ್ರಾಮದ ಶಾಲೆಯಲ್ಲಿ ನಿರಾಶ್ರಿತ ಕೇಂದ್ರ ತೆರೆಯಲಾಗಿದ್ದು ಅಧಿಕಾರಿಗಳು ಸ್ಥಳದಲ್ಲೇ ಬೀಡು ಬಿಟ್ಟು ಮುಂಜಾಗ್ರತಾ ಕ್ರಮ ವಹಿಸಿದ್ದಾರೆ. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಡಾ. ಸುಮನ್, ಉಪ ವಿಭಾಗಾಧಿಕಾರಿ ಪ್ರವಾಹ ಪೀಡಿತ ಪ್ರದೇಶ  ಹಾಗೂ  ನಿರಾಶ್ರಿತರ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕೆಂದು ಸ್ಥಳಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವರದಿ : ಮುಬಾರಕ್