ರಾಯಬಾಗ : ೨೦೦ ಕ್ಕೂ ಹೆಚ್ಚು ಗುಡಿಸಲುಗಳು ಜಲಾವೃತ

ರಾಯಬಾಗ : ಕೃಷ್ಣಾ ನದಿ ನೀರಿನಿಂದ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ೨೦೦ ಕ್ಕೂ ಹೆಚ್ಚು ಗುಡಿಸಲುಗಳು ಜಲಾವೃತಗೊಂಡಿವೆ. ಇಲ್ಲಿ ವಾಸ ಮಾಡುತ್ತಿದ್ದ ಅಲೆಮಾರಿ ಜನಾಂಗದ ಕುಟುಂಬಸ್ಥರ ಜೀವನ ಸಂಪೂರ್ಣ ಅತಂತ್ರವಾಗಿದೆ.

ಚಿಂಚಲಿ ಪಟ್ಟಣದ ಭೀಮನಗರ ಸೇರಿದಂತೆ ಇನ್ನೀತರ ಬಡಾವಣೆಗಳಲ್ಲಿ ನೀರು ನುಗ್ಗಿ, ನೂರಾರು ಮನೆಗಳು ಮನೆಗಳು ಜಲಾವೃತಗೊಂಡು, ಮನೆಯಲ್ಲಿದ್ದ ಪೀಟೋಪಕರಣಗಳು ಸಂಪೂರ್ಣ ಹಾಳಾಗಿ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಚಿಂಚಲಿ ಮತ್ತು ಮೊರಬ ಗ್ರಾಮದ ನಡುವಿನ ಸಂಪರ್ಕ ಕೂಡಾ ಕಡಿತಗೊಂಡಿದೆ.

ವರದಿ : ಆನಂದ