ವಿದ್ಯುತ್ ಶಾಟ್ ಸರ್ಕ್ಯೂಟ್ ಸಂಭವಿಸಿ ಐವರು ಹಾಸ್ಟೆಲ್ ವಿದ್ಯಾರ್ಥಿಗಳ ಸಾವು..!!

ಕೊಪ್ಪಳ: ನಗರದ ಬನ್ನಿಕಟ್ಟೆ ಬಳಿ ಇಂದು ಬೆಳ್ಳಂಬೆಳಗ್ಗೆ ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಧ್ವಜಾರೋಹಣ ಕಂಬ ತೆಗೆಯಲು ಹೋದ ಐವರು ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿದ್ಯುತ್ ಶಾಟ್ ಸರ್ಕ್ಯೂಟ್ ಸಂಭವಿಸಿ ಸ್ಥಳದಲ್ಲಿಯೇ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

ಹೃದಯ ವಿದ್ರಾವಕ ಘಟನೆ ಹಾಸ್ಟೇಲ್ ಮೇಲಿನ ಧ್ವಜ ಕಂಬದ ಹಗ್ಗವನ್ನು ತರಲು ಹೇಳಿದ ಬಿಸಿಎಂ ಮೆಟ್ರಿಕ್ ಪೂರ್ವ ವಸತಿ ನಿಲಯ ಹಾಸ್ಟೆಲ್ ಮೇಲ್ವಿಚಾರಕನ ಮಾತು ಕೇಳಿ ಹಗ್ಗವನ್ನು ತರಲು ಹೋದ ಮಕ್ಕಳು, ಹಗ್ಗ ಬಾರದೆ ಹೋದಾಗ ಧ್ವಜ ಕಂಬವನ್ನು ಅಲ್ಲಾಡಿಸಿದಾಗ ಕಂಬಕ್ಕೆ ವಿದ್ಯುತ್ ತಗುಲಿ ಈ ದಾರಣು ಘಟನೆ ನಡೆದಿದೆ.

9ನೇ ತರಗತಿ ದೇವರಾಜ್ ಹಲಗೇರಿ, ಹೈದರನಗರದ ಕುಮಾರ್ ಮತ್ತು 8ನೇ ತಗರತಿಯ ಗಣೇಶ್ ಲಾಚನಕೇರಿ 10ನೇ ತರಗತಿಯ ಮಲ್ಲಿಕಾರ್ಜುನ್ ಮೆತಗಲ್, ಬಸವರಾಜ ಲಿಂಗದಳ್ಳಿ ಮೃತ ದುರ್ದೈವಿಗಳು. ಹಾಸ್ಟೆಲ್ ವಿದ್ಯಾರ್ಥಿಗಳ ಶವಗಳನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದ್ದು ಸಂಬಂಧಿಕರ ಅಕ್ರಂದನ ಮುಗಿಲು ಮುಟ್ಟಿದೆ.

ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿಗಳ ಪಾಲಕರು ನಾನಾ ಗ್ರಾಮಗಳಿಂದ ಆಗಮಿಸುತ್ತಿದ್ದು, ಹಾಸ್ಟೆಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಶವಗಾರದ ಎದುರು ಪೋಷಕರಿಂದ ಪ್ರತಿಭಟನೆ ನಡೆಯುತ್ತಿದೆ. ಪೊಲೀಸ್ ಅಗ್ನಿಶಾಮಕ ಸಿಬ್ಬಂದಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.