ಮತ್ತಷ್ಟು ಅಪಾಯದಲ್ಲಿ ಸಿಲುಕುತ್ತಿರುವ ಜನತೆ. ಮಾನವೀಯತೆ ಮೆರೆದ ಅಲ್ ಖೈರ್ ಸಂಘಟನೆ ಯುವಕರು

ಗೋಕಾಕ : ಕಳೆದ ನಾಲ್ಕೈದು  ದಿನಗಳಿಂದ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ ಗೋಕಾಕ ತಾಲೂಕಿ ಕೊಣ್ಣೂರಲ್ಲಿ  ಜನರ ಜೀವನ ತುಂಬಾ ಅಸ್ತವ್ಯಸ್ಥಗೊಂಡಿದೆ. ತಾಲೂಕಿನ ಹಿರಣ್ಯಕೇಶಿ, ಬಳ್ಳಾರಿ ನಾಲಾ, ಕೊಯ್ನಾ ಹಾಗೂ ಹಿಡಕಲ್ಲ್ ಡ್ಯಾಂ ನಿಂದ ನೀರು ಅಪಾಯ ಮಟ್ಟಮೀರಿ  ಹರಿಯುತ್ತಿರುವುದರಿಂದ ಪ್ರವಾಹದಿಂದ ಜನರು ಮತ್ತಷ್ಟು ಅಪಾಯದಲ್ಲಿ ಸಿಲುಕಿದ್ದಾರೆ.

ಹಿರಣ್ಯಕೇಶಿ, ಬಳ್ಳಾರಿ ನಾಕಾ ಹಾಗೂ ಹಿಡಕಲ್ ಡ್ಯಾಂ ನಿಂದ 1ಲಕ್ಷ .25 ಸಾವಿರ ಕ್ಯುಸೆಕ್‍ಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದರಿಂದ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಏರಿಕೆಯಾಗುತ್ತಿದೆ. ಬಹಳಷ್ಟು ಜನ ಹಾನಿಗೋಳಗಾಗಿ ತೊಂದರೆ ಅನುಭವಿಸುವಂತಾಗಿದ್ದು,  ಕೊಣ್ಣೂರ ಪಟ್ಟಣದ ಅಂಬೇಡ್ಕರ ನಗರ, ಪದ್ಮಾ ನಗರ, ಜೈನಗಲ್ಲಿಯಲ್ಲಿ ನೂರಾರು ಮನೆಗಳಿಗೆ ಮತ್ತು ಶಾಲೆಗಳಲ್ಲಿ‌ ನೀರು ನುಗ್ಗಿದ ಪರೀಣಾಮ, ಇಲ್ಲಿನ ಕೆಲ ಕುಟುಂಬಸ್ಥರುಸುರಕ್ಷಿತ ಸ್ಥಳಗಳಿಗೆ ತೆರಳಿದರೆ ಇನ್ನು ಕೆಲವರು ರೇಲ್ವೆ ಮೂಲಕ ತಮ್ಮ ಸಂಬಂಧಿಕರ ಊರುಗಳಿಗೆ ತೆರಳುತ್ತಿದ್ದಾರೆ.

ಇನ್ನು ಪ್ರವಾಹದಲ್ಲಿ ಸಿಲುಕಿರುವ ಸಂತ್ರಸ್ತರಿಗೆ ಕೊಣ್ಣೂರ ಪುರಸಭೆಯ ಸಿಬ್ಬಂದ ಹೊರತು ಪಡಿಸಿ, ಗೋಕಾಕ ತಾಲೂಕಾಡಳಿತದ ಯಾವ ಅಧಿಕಾರಿಯು ಕೂಡ ಕೊಣ್ಣೂರಿನ ಸಂತ್ರಸ್ಥರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಸ್ವಯಂ ಪ್ರೇರಿತ ಸೇವೆ : ಸ್ಥಳಿಯ ಮುಸ್ಲಿಂ ಜಮಾತಿನ ಅಲ್ ಖೈರ್ ಸಂಘಟನೆಯ ಯುವಕರು ಸ್ವಯಂ ಪ್ರೇರಿತರಾಗಿ ರಾತ್ರಿ ಹಗಲು ಎನ್ನದೆ ಪ್ರವಾಹದ ಸ್ಥಳಕ್ಕೆ ತೆರಳಿ ಸಂತ್ರಸ್ಥರ ದನ ಕರುಗಳನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿ,ಅವರಿಗೆ ಊಟ ಉಪಚಾರ, ವಸತಿ ಹಾಗೂ ಇನ್ನಿತರ ಸಕಲ ಸೌಲಭ್ಯವನ್ನು ಒದಗಿಸಿ ಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೆ ಸಂತ್ರಸ್ಥರಿಗೆ ಬೇಕಾದ ಎಲ್ಲ ಸೌಲಭ್ಯ ನೀಡುವುದಾಗಿ ಅಲ್  ಖೈರ್, ಸಂಘಟನೆಯ ಕಾರ್ಯಕರ್ತರು ತಿಳಿಸಿದ್ದಾರೆ.