ನೆರೆ ಪ್ರವಾಹ ಸ್ಥಳಕ್ಕೆ ಶಾಸಕ ಐಹೊಳೆ ಬೇಟಿ

ರಾಯಬಾಗ : ಕೃಷ್ಞಾ ನದಿ ತೀರ ಪ್ರದೇಶದಲ್ಲಿ ಕ್ಷಣ ಕ್ಷಣಕ್ಕೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜನ ಹಿತ ಕಾಯುಲು ಮುಂಜಾಗೃತ ಕ್ರಮ ವಹಿಸಬೇಕೆಂದು ರಾಯಬಾಗ ಮತಕ್ಷೇತ್ರದ ಶಾಸಕ ಡಿ.ಎಮ್. ಐಹೊಳೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನೆರೆ ಪ್ರವಾಹ ಸ್ಥಳಗಳಿಗೆ ಬೇಟಿ ನೀಡಿ, ಪರಿಶೀಲನೆ ನಡೆಸಿದ ಅವರು, ಪಟ್ಟಣದ ಕೆಲ ಪ್ರದೇಶಗಳಲ್ಲಿ ನೀರು ನುಗ್ಗುವ ಸಂಭವವಿದ್ದು, ತಕ್ಷಣ ಮನೆಗಳನ್ನು ಖಾಲಿ ಮಾಡಬೇಕು. ಅಲ್ಲದೇ ಚಿಂಚಲಿ ಪಟ್ಟಣದ ಉಪ್ಪಾರವಾಡಿ ತೋಟಗಳಲ್ಲಿ ಶೀಘ್ರವೇ ಗಂಜಿ ಕೇಂದ್ರ ಸ್ಥಾಪಿಸಿ, ಆರೋಗ್ಯ ಸೇವೆ ಹಾಗೂ ದನಕರುಗಳಿಗೆ ಮೇವಿನ ವ್ಯವಸ್ಥೆ ಮಾಡಬೇಕೆಂದು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.