ಗಾಯಾಳು ರಕ್ಷಿಸಿ ಮಾನವೀಯತೆ ಮೆರೆದ ಜಮಖಂಡಿ ಅಧಿಕಾರಿಗಳು

ಜಮಖಂಡಿ : ಕಾರು ಹಾಗೂ ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರೀಣಾಮ, ಬೈಕ್ ನ ಹಿಂಬದಿ ಸವಾರನಿಗೆ ಗಂಬೀರ ಗಾಯಗಳಾವೆ.

ಜಮಖಂಡಿ ತಾಲ್ಲೂಕಿನ ಅಲಗೂರು ಗ್ರಾಮದ ಬಳಿ ಈ ಅವಘಡ ಸಂಭವಿಸಿದ್ದು, ಬೈಕ್ ಹಿಂಬದಿ ಸವಾರ ಮುತ್ತಪ್ಪ ಪರಮಗೊಂಡ ಎಂಬ ಯುವಕನಿಗೆ ಗಂಬೀರ ಗಾಯಗೊಂಡಿದ್ದಾನೆ.

ಆಲಗೂರು ನೆರೆ ಸಂತ್ರಸ್ತರ ಸ್ಥಳಾಂತರಕ್ಕೆ ಬಂದಿದ್ದ ಜಮಖಂಡಿ ಎಸಿ ಇಕ್ರಮ್, ತಾಲೂಕಾ ತಹಶೀಲ್ದಾರ ಪ್ರಶಾಂತ ಚನಗೊಂಡ ರಸ್ತೆಯಲ್ಲಿ ನರಳಾಡುತ್ತಿದ್ದ ಗಾಯಾಳು ಮುತ್ತಪ್ಪನನ್ನು ಆಕಸ್ಮೀಕವಾಗಿ ಕಂಡು, ಚಿಕಿತ್ಸೆಗಾಗಿ ಖುದ್ದಾಗಿ ತಮ್ಮ ವಾಹನದಲ್ಲಿಯೇ ಕರೆದುಕೊಂಡು ಆಸ್ಪತ್ರೆಗೆ ತೆರಳಿ ಸಮಯ ಪ್ರಜ್ಞೆ ಮೆರೆದಿದ್ದಾರೆ.

ಅಧಿಕಾರಿಗಳ ಈ ಮಾನವಿಯತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.