ಗಡಿ ಭಾಗದ ಯುವಕರಿಂದ ಮುಖ್ಯಮಂತ್ರಿಗಳಿಗೆ ಹಿಗೊಂದು ಪತ್ರ.

*ಗೆ,*

*ಮಾನ್ಯ ಮುಖ್ಯಮಂತ್ರಿಗಳು,*
*ಎಚ್. ಡಿ.ಕುಮಾರಸ್ವಾಮಿ*
*ಕರ್ನಾಟಕ ಸರ್ಕಾರ.*

ವಿಷಯ:ಕೈಗಾರಿಕಾ ನಿರ್ಮಾಣದ ಬಗ್ಗೆ

ನಮ್ಮ ಉತ್ತರ ಕರ್ನಾಟಕ ಯುವಕರ ಪರಿಸ್ಥಿತಿ ಹೇಗಿದೆ ಅಂದ್ರೆ, ITI, Dilpoma, BE ಏನೋ ಕಲಿತರು ಕೆಲಸಕ್ಕೆ ಅಂತ ಮತ್ತೆ ಬೆಂಗಳೂರಿನತ್ತ ಬರಬೇಕು.! ಅದು 50, 100 KM ಆದ್ರೆ ಹೇಗೋ ಬರಬಹುದು ಆದ್ರೆ ನಮಗೆ ಬರೋಬ್ಬರಿ 500-700 ಕಿಲೋಮೀಟರ್ ಆಗುತ್ತೆ.!

ಇರಲಿ, ಕಲಿತು ಮನೆಯಲ್ಲಿ ಕೂರಲು ಬಿಸಿರಕ್ತದ ಹುಡುಗರ ಮನಸ್ಸು ಕೇಳುವದಿಲ್ಲ, ಈ ಮೊದಲೇ ಬೆಂಗಳೂರುನಲ್ಲಿ ಕೆಲಸ ಮಾಡುತ್ತಿರುವ ಗೆಳೆಯರಿಗೆ “ನಾನು ಬರತಿನಿ ಕೆಲಸಕ್ಕೆ” ಅಂತ ಹೇಳಿ ಕಾಲಿಡಲು ಜಾಗವಿಲ್ಲದ ಟ್ರೇನ್ ಹತ್ತಿ ನೂರಾರು ಕನಸು ಕಟ್ಟಿಕೊಂಡು ಬೆಂಗಳೂರಿಗೆ ಬರುತ್ತಾನೆ. ಒಂದು ವಾರ ಆ ಕಂಪನಿ, ಈ ಕಂಪನಿ ಅಂತ ಕೆಲಸಕ್ಕಾಗಿ ತಿರುಗಾಡಿ ಚಪ್ಪಲಿ ಸವೆದು ಹೋಗಿರುತ್ತದೆ. ಕೊನೆಗೂ ಯಾವುದೇ ಒಂದು ಕಂಪನಿಯಲ್ಲಿ ಕೆಲಸ ಸಿಗುತ್ತದೆ. 8000 ಸಂಬಳ ರಾತ್ರಿ ಪಾಳೆ.!

ಮನೆಯಲ್ಲಿ ಅವ್ವ ಮಾಡಿದ ರೊಟ್ಟಿ ಪಲ್ಯ ತಿಂದು ಬದುಕಿದ ಜೀವ ಬೆಂಗಳೂರಿನ ಅನ್ನ-ಸಾರಿಗೆ ಹೊಂದಿಕೊಳ್ಳದೆ ಜ್ವರ ಬಂದು ಬಳಲುತ್ತಾನೆ. ದೂರದ ಬೆಂಗಳೂರಿಗೆ ಬಂದಿದ್ದೇನೆ ವಾಪಸ ಹೋದರೆ ಗೌರವ ಇಲ್ಲ ಅಂತ ಎಲ್ಲ ನೋವುಗಳನ್ನು ನುಂಗಿ ಕೆಲಸಕ್ಕೆ ಹೋಗಲು ಶುರು ಮಾಡುತ್ತಾನೆ. 2000 ಮನೆ ಬಾಡಿಗೆ, 2000 ಊಟದ ಖರ್ಚು, 1000 ಮೇಲಿನ ಖರ್ಚುಗೆ, ಒಟ್ಟು 5000 ಅವನ ಅಲ್ಲಿನ ಜೀವನಕ್ಕೆ ಹಾಳಾಗುತ್ತದೆ.! 2000ರೂ. ಕೊಟ್ಟರೂ ನಮ್ಮ ಜವಾರಿ ಊಟ ಸಿಗುವುದು ಕನಸಿನ ಮಾತು.!

ಒಂದೆರಡು ತಿಂಗಳು ಕೆಲಸ ಮಾಡಿರುತ್ತಾನೆ, ಒಂದು ತಿಂಗಳ ಸಂಬಳ ತಗೊಂಡು ಮನೆ ಬಾಡಗಿ, ಊಟದ ಮೆಸ್ ಬಿಲ್ ಕೊಟ್ಟು 3000ರೂ. ಮನೆಗೆ ಹಾಕಿರುತ್ತಾನೆ. ಅಷ್ಟರಲ್ಲೇ ವಿಧಿಯ ಆಟ ಅಪ್ಪಾನೋ ಅಮ್ಮನಿಗೋ ಸಿರಿಯಸ್ ಅಂತ ಪೋನ್ ಬರುತ್ತೆ.! ಕೈಯಲ್ಲಿರುವ ದುಡ್ಡು ಎಲ್ಲಾ ಖಾಲಿ ಆಗಿರುತ್ತೆ. ಆದ್ರೆ ಅತ್ತಕಡೆ ಊರಿನಲ್ಲಿ ತಂದೆ/ತಾಯಿಗೆ ಸಿರಿಯಸ್ ಅಂತ ಪೋನ್.! ಹೇಗೋ ಮಾಡಿ ಅವರಿವರ ಹತ್ತಿರ ಸಾಲ ಮಾಡಿ ಊರಕಡೆಗೆ ಹೋಗುತ್ತಾನೆ.!

ತಿಂಗಳ ಪೂರ್ತಿ ರಾತ್ರಿ ದುಡುದಿದ್ದರೂ ಆ ಜೀವಕ್ಕೆ ಊರಿಗೆ ಹೋಗಲು ಹಣವಿರುವುದಿಲ್ಲ.! ಇದು ಒಬ್ಬರ ಪರಿಸ್ಥಿತಿ ಅಲ್ಲ ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ಪ್ರತಿಯೊಬ್ಬ ಯುವಕನ ನೋವಿನ ಕಥೆ ಅಲ್ಲ ವ್ಯಥೆ.! 😭

ಲಕ್ಷಾಂತರ ಉತ್ತರ ಕರ್ನಾಟಕ ಭಾಗದವರೂ ಕಂಪನಿಯಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಕಂಪನಿ ಹೆಸರು ತರುತ್ತಾರೆ. ಆದ್ರೆ ನಮ್ಮರಿಗೆ ಕಡಿಮೆ ಸಂಬಳ, ಹೆಸರು ಬರುವುದು ಮಾತ್ರ ಬೆಂಗಳೂರು ಸಿಲಿಕಾನ್ ವ್ಯಾಲಿ, IT ಹಬ್, ಅತಿ ಹೆಚ್ಚು ತೆರಿಗೆ ಕಟ್ಟುವ ನಗರ.!

ವ್ಹಾಹ್ ವ್ಹಾ ಮೆಚ್ಚಿದೆ.. ಕಷ್ಟಪಟ್ಟು ದುಡಿದವರು ನಾವು, ಹೆಸರು ಮಾತ್ರ ಬೆಂಗಳೂರು.! ನಮ್ಮ ಭಾಷೆಯಲ್ಲಿ ಒಂದು ಗಾದೆ ಇದೆ “ಬಸರ ನಮ್ಮದು, ಹೆಸರು ಅವರದು” ಅಂತ ಹಾಗಾಗಿದೆ.!

ಈ ಪುರುಷಾರ್ಥಕ್ಕೆ ನಾವು ದೂರದ ಬೆಂಗಳೂರಿಗೆ ಹೋಗಿ ಕೆಲಸ ಮಾಡಬೇಕಾ.? 😠

ಇದೇ ಕಂಪನಿಗಳು ನಮ್ಮ ಜಿಲ್ಲೆಯಲ್ಲಿ, ನಮ್ಮ ಹತ್ತಿರದಲ್ಲೇ ಇದ್ದರೇ ಕೇವಲ‌ 5000ರೂ‌. ಸಂಬಳ ಕೊಟ್ಟರೂ ನೆಮ್ಮದಿಯಾಗಿ ತಂದೆ-ತಾಯಿ ಮಕ್ಕಳು ಕುಟುಂಬದ ಜೊತೆ ಇರಬಹುದು.!

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯೂ ಕಡಿಮೆ ಆಗುತ್ತದೆ‌. ಇಡೀ ಕರ್ನಾಟಕ ಅಭಿವೃದ್ಧಿ ಪಥದತ್ತ ಸಾಗುತ್ತದೆ. ದೇಶದ ನಂ. 1 ರಾಜ್ಯವಾಗುತ್ತದೆ. ಕನ್ನಡಿಗರ ಕೀರ್ತಿ ಪತಾಕೆ ಜಗದಗಲಕ್ಕೆ ಪಸರಿಸುತ್ತದೆ..

ನಮಗೆ ಕರ್ನಾಟಕವನ್ನು ಒಡೆದು, ಹಾಳು ಮಾಡಿ ವಿಕೃತ ಆನಂದ ಪಡುವ ಅವಶ್ಯಕತೆ ಇಲ್ಲ, ಆದರೆ ನಾವು ಎಷ್ಟು ದಿನ ಅಂತ ಈ ನರಕಯಾತನೇಯಲ್ಲಿ ಸಾಯಬೇಕು.? ನಾವು ಕನ್ನಡಿಗರಲ್ಲವೇ.?

ನಾಯಕರೇ, ಇನ್ನಾದರೂ ಎಚ್ಚರವಾಗಿ ನಮ್ಮ ಭಾಗದ ಅಭಿವೃದ್ಧಿಗಾಗಿ ಟೊಂಕಕಟ್ಟಿ ನಿಲ್ಲಿ ಉತ್ತರ ಕರ್ನಾಟಕವನ್ನು ಅಭಿವೃದ್ಧಿಯ ಶಿಖರದತ್ತ ಕೊಂಡೊಯ್ಯಿರಿ.. 

*ಇಂತಿ,*
*ಗಡಿ ಭಾಗದ ವಿದ್ಯಾರ್ಥಿಗಳು*