ಹುಕ್ಕೇರಿ ಹಿರೇಮಠದ ಶ್ರೀ ಗಳಿಂದ ಸಂತ್ರಸ್ಥರಿಗೆ ಅನ್ನದಾಸೋಹ

ಬೆಳಗಾವಿ : ಜಿಲ್ಲೆಯಲ್ಲಿ ಧಾರಾಕಾರ ಮಳೆಗೆ ಹುಕ್ಕೇರಿ ಸಮೀಪದ ನದಿಯ ದಡದಲ್ಲಿರುವ ಜನ‌ತೆ ಮನೆಗಳನ್ನು ಕಳೆದುಕೊಂಡಿದ್ದಾರೆ. ಬಡಕುಂದ್ರಿಯ ಹೊಳಯ್ಯಮ ದೇವಿಯ ದೇವಸ್ಥಾನ ಕೂಡಾ ನೀರಿನಲ್ಲಿ ಸಂಪೂರ್ಣ ಮುಳಗಡೆಯಾಗಿದೆ, ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಗ್ರಾಮಕ್ಕೆ ತೆರಳಿ ಸಂತ್ರಸ್ಥರಿಗೆ ಗಂಜಿಕೇಂದ್ರ ಆರಂಭಿಸಿ ಅನ್ನದಾಸೋಹ ಮಾಡಿದ್ದಾರೆ.

ಈಗಾಗಲೇ ಅಧಿಕಾರಿಗಳು, ಜನಪ್ರತಿನಿದಿಗಳು ನೈತಿಕ ಬಲವನ್ನು ತುಂಬುದರ ಜತೆಗೆ ವಿಶೇಷವಾಗಿ ಸಹಾಯ ಮಾಡುತ್ತಿದ್ದಾರೆ. ಅವರೊಂದಿಗೆ ಹುಕ್ಕೇರಿ ಹಿರೇಮಠದಿಂದ ಬಡಕುಂದ್ರಿ, ಸಂಕೇಶ್ವರ ಸೇರಿದಂತೆ  ಮೂರ್ನಾಲ್ಕು ಗಂಜಿ ಕೇಂದ್ರಗಳ ಮೂಲಕ ಅನ್ನ ಸಂತರ್ಪಣೆ ನೀಡಿ, ಮಳೆ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ಚಿಕ್ಕಮಕ್ಕಳ ಬಗ್ಗೆ ಹೆಚ್ಚಿನ ಜಾಗೃತಿ ವಹಿಸಬೇಕೆಂದು ಸಂತ್ರಸ್ಥರಿಗೆ ಶ್ರೀಗಳು ಜಾಗೃತಿ ಮೂಡಿಸಿದರು.

ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ,  ಪ್ರಕೃತಿ ಮಾತೆ ಶಾಂತಳಾಗಿ ಎಲ್ಲರೂ ಸಮಾಧಾನದಿಂದ ಇರುವಂತೆ ಆಶೀರ್ವದಿಸಲಿ ಎಂದು ಹಿರಣ್ಣಯ್ಯಕೇಶಿ ನದಿಗೆ ಶ್ರೀಗಳು ಬಾಗಿನ ಅರ್ಪಿಸಿದರು.

ಬಡಕುಂದ್ರಿ ಗ್ರಾಮದ ಮುಖಂಡ ಎಚ್.ಎಲ್.ಪೂಜಾರಿ ಮಾತನಾಡಿ, ಶ್ರೀಗಳು ಜನರಿಗೆ ಅನ್ನ ಧಾನ ಮಾಡುವುದರ ಮೂಲಕ ನಿರಾಶ್ರೀತರಿಗೆ ನೈತಿಕ ಬಲ ತುಂಬಿದ್ದಾರೆ. ಶಾಸಕ ಉಮೇಶ ಕತ್ತಿ ಸೇರಿದಂತೆ ಎಲ್ಲ ಅಧಿಕಾರಿಗಳು ನಮ್ಮನ್ನು ವಿಚಾರಿಸಿ, ದೈರ್ಯ ತುಂಬುತ್ತಿದ್ದಾರೆ. ನಾವೆಲ್ಲರೂ ಕೂಡ ಸಮಾಧಾನದಿಂದ ಇದ್ದೇವೆ. ಇಲ್ಲಿ ಯಾವುದೇ ಅನಾಹುತಗಳು ನಡೆದಿಲ್ಲ ಎಂದು ಮನವರಿಕೆ ಮಾಡಿ, ಶ್ರೀಗಳಿಗೆ  ಧನ್ಯವಾದ ಸಲ್ಲಿಸಿದರು.