ಜಮ್ಮು- ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನ ರದ್ದು. ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ದೆಹಲಿ : ಪ್ರಧಾನಿ ಮೋದಿ ಸಚಿವ ಸಂಪುಟ ಸಭೆ ನಡೆಸಿದ್ದು, ಜಮ್ಮು- ಕಾಶ್ಮೀರದ ಬಗ್ಗೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸಭೆಯಲ್ಲಿ ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಿಬ್ಬಂದಿ ಅಜೀತ್ ಧೋವಲ್ ಸೇರಿ ಹಲವು ಕೇಂದ್ರ ಸಚಿವರು ಭಾಗಿಯಾಗಿದ್ದರು.

ಈ ಕುರಿತಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಜಮ್ಮು-ಕಾಶ್ಮೀರ ತಿದ್ದುಪಡಿ ಮಸೂದೆ ಮಂಡಿಸಿದ್ದು, ಆರ್ಟಿಕಲ್  35A, 370 ಹಿಂತೆಗೆದುಕೊಳ್ಳುವ ಮೂಲಕ, ಜಮ್ಮು-ಕಾಶ್ಮೀರಕ್ಕಿದ್ದ 60 ವರ್ಷಗಳ ವಿಶೇಷ ಸ್ಥಾನಮಾನ, ವಿಶೇಷ ಅಧಿಕಾರವನ್ನು ರದ್ದುಪಡಿಸಿದ್ದಾರೆ. ಅ್ಲದೇ, ಜಮ್ಮು-ಕಾಶ್ಮೀರವನ್ನ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ.

ಇಷ್ಟು ದಿನ ರಾಜ್ಯವಾಗಿದ್ದ ಜಮ್ಮು- ಕಾಶ್ಮೀರ, ಲಡಾಕ್ ಈಗ ಕೇಂದ್ರಾಡಳಿತ ಪ್ರದೇಶವಾಗಿದೆ. ಜಮ್ಮು-ಕಾಶ್ಮೀರ, ಲಡಾಕ್ ನೇರವಾಗಿ ಕೇಂದ್ರದ ಆಡಳಿತಕ್ಕೆ ಒಳಪಡುತ್ತದೆ.