ಸೋರುತಿಹುದು ಬಿಇಓ ಕಛೇರಿ. ಆತಂಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂಧಿ

ಸೇಡಂ : ಸಂಪೂರ್ಣ ಶೀತಲಗೊಂಡ ಮೇಲ್ಚಾವಣಿ, ಅಲ್ಪ ಮಳೆಗೆ ಸೋರುತ್ತಿರುವ ಕಛೇರಿ, ಯಾವ ಸಂದರ್ಭದಲ್ಲಾದರೂ ಕುಸಿದು ಬೀಳಬಹುದು ಅನ್ನೋ ಭಯ, ಹೀಗೆ ಆತಂಕದಲ್ಲಿಯೇ ನಿತ್ಯ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಇಲ್ಲಿಯ ಸರ್ಕಾರಿ ಬಿಇಒ ಕಛೇರಿಯ ಸಿಬ್ಬಂಧಿಗಳದ್ದಾಗಿದೆ.

ಕಲುರಗಿ ಜಿಲ್ಲೆಯ ಸೇಡಂ ತಾಲೂಕಿನ ಬಿಇಒ ಕಚೇರಿಯು ಸಂಪೂರ್ಣ ಹಾಳಾಗಿ ಹೋಗಿದೆ. ಜಿಟಿ-ಜಿಟಿ ಮಳೆಗೆ ಕಛೇರಿಯ ಕೊಠಡಿಗಳು ಸೋರುತ್ತಿವೆ. ಕಛೇರಿಯಲ್ಲಿನ ದಾಖಲೆಗಳನ್ನು ಉಳಿಸಿಕೊಳ್ಳೊದು ಕಷ್ಟಕರವಾಗಿದೆ ಅನ್ನೋದು ಇಲ್ಲಿಯ ಸಿಬ್ಬಂಧಿಗಳ ಅಳಲು. ಈ ಬಗ್ಗೆ ಕೇಳಿದರೆ, ಕಛೇರಿ ನಿರ್ಮಾಣಕ್ಕಾಗಿ ನಾವು ಹಣ ಮೀಸಲಿಟ್ಟಿದ್ದೇವೆ, ಆದರೆ ಇಲ್ಲಿ ಯಾರೂ ಭೂಮಿಯನ್ನು ನೀಡುತ್ತಿಲ್ಲಾ ಎನ್ನುತ್ತಾರೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯದರ್ಶಿ. ಕಟ್ಟಡ ನಿರ್ಮಿಸಲು ಮೇಲಾಧಿಕಾರಿಗಳು ಸಹಕರಿಸಲಿ, ಭೂ ದಾನಿಗಳು ಭೂಮಿಯನ್ನು ನೀಡಲಿ ಎಂದು ಸಿಬ್ಬಂದಿಗಳು ವಿನಂತಿ ಮಾಡಿಕೊಂಡಿದ್ದಾರೆ.

ಸರಕಾರಿ ಕಛೇರಿಗಳನ್ನು ನಿರ್ಮಿಸಲು ಜಾಗದ ಕೊರತೆ ಇದೆ ಎನ್ನುವುದು ಎಷ್ಟು ಸರಿ ಅನ್ನೋದು ಪ್ರಜ್ಞಾವಂತ ನಾಗರಿಕರ ಪ್ರಶ್ನೆಯಾಗಿದೆ. ಅದೇನೆ ಇರಲಿ ಆದಷ್ಟು ಬೇಗನೆ ಅಚ್ಚುಕಟ್ಟಾದ ಕಛೇರಿ ನಿರ್ಮಿಸಿದರೆ ಸಿಬ್ಬಂಧಿಗಳ ಆತಂಕ ದೂರವಾಗುತ್ತದೆ.