ಸಹಾಯ ಕೇಳಿದ ಅಂಧ ಜೋಡಿಗೆ ಬೈದು ಕಳಿಸಿದ ಸಚಿವ ರೇವಣ್ಣ

ಸಹಾಯ ಯಾಚಿಸಿದ ಅಂಧ ಜೋಡಿಗೆ ಸಚಿವರೊಬ್ಬರು ಬೈದು ವಾಪಸ್ ಕಳಿಸಿದ ಘಟನೆ ಹಾಸನದ ಹೊಳೆನರಸೀಪುರ ತಾಲೂಕಿನಲ್ಲಿ ನಡೆದಿದೆ.

ಅಂಧ ಯುವಕ ಅರಸೀಕೆರೆಯ ದೇವೀಹಳ್ಳಿ ಮೂಲಕ ದಯಾನಂದ ಮತ್ತು ಹೊಳೇನರಸೀಪುರದ ಅಂಧ ಯುವತಿ ಮದುವೆ ಆಗಲು ಇಚ್ಚಸಿದ್ದರು. ಸಚಿವ ರೇವಣ್ಣ ಬಳಿಗೆ ತಮ್ಮ ಮದುವೆಗೆ ಸಹಾಯ ಮಾಡುವಂತೆ ಮನವಿ ಮಾಡಿದರು. ಆದರೆ ಸಚಿವ ರೇವಣ್ಣ ನೀವು ಮುಖ್ಯಮಂತ್ರಿಗಳ ಬಳಿ ಹೋಗಿ ಎಂದು ಅಂಧ ಜೋಡಿಯನ್ನು ಬೈದು ಕಳಿಸಿದ್ದಾರೆ.

ಜಿಲ್ಲೆಯ ಹೊಳೆನರಸೀಪುರ ತಾಲೂಕು ಪಂಚಾಯತ್ ನ ಸಭಾಂಗಣದಲ್ಲಿ ಸಭೆ ನಡೆದಿತ್ತು. ಅಲ್ಲಿ ಒಳ ಹೋಗಲು ಪ್ರಯತ್ನಿಸಿದ ಜೋಡಿಗೆ ಹಾಗೆಲ್ಲ ಒಳಗಡೆ ಹೋಗಬೇಡಿ ಎಂದು ತಡೆದು ನಿಲ್ಲಿಸಿದ್ದಾರೆ. ಶಾಸಕರು ಹೊರ ಬರುವವರೆಗೆ ನಿಂತು ಅವರು ಹೊರಗೆ ಬಂದ ಮೇಲೆ ಸಹಾಯ ಕೇಳಿದ್ದಾರೆ. ಆದರೆ ಸಚಿವ ರೇವಣ್ಣ ಮುಖ್ಯಮಂತ್ರಿಗಳ ಹೆಸರು ಹೇಳಿ ಅಲ್ಲಿಂದ ಹೊರಟು ಹೋಗಿದ್ದಾರೆ.

ಆಗ ಅಲ್ಲಿಯೇ ಇದ್ದ ಇನ್ನಿತರ ಜನಪ್ರತಿನಿಧಿಗಳು ಮುಂದಿನ ಜೂನ್ 25 ರಂದು ಧನಸಹಾಯ ಮಾಡುವುದಾಗಿ ಹೇಳಿದ್ದಾರೆ. ವಿಶೇಷ ಚೇತನರಿಗೆ ಸಮಾಧಾನ ಮಾಡಿ, ಸಹಾಯ ಮಾಡಿ ಮಾನವೀಯತೆ ತೋರಿಸಿದ್ದಾರೆ.