ಹಣಕ್ಕೆ ಬೇಡಿಕೆ: ಮೂವರು ನಕಲಿ ಪತ್ರಕರ್ತರ ಬಂಧನ

ರಾಮದುರ್ಗ : ಪತ್ರಕರ್ತರೆಂದು ಹೇಳಿಕೊಂಡು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟು ಬ್ಲಾಕ್ಮೇಲ್ ಮಾಡುತ್ತಿರುವ ಮೂವರು ನಕಲಿ ಪತ್ರಕರ್ತರ ಬಂಧನ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಡೆದ ಘಟನೆ.

ಬಾಗಲಕೋಟೆ ಜಿಲ್ಲೆ ಜಮಖಂಡಿ ಮೂಲದ ಪರಶುರಾಮ ಹೊಸಮನಿ, ಮುಧೋಳದ ಮಹ್ಮದ್ ಇಸ್ಮಾಯಿಲ್ ಕುಡಚಿ ಹಾಗೂ ರಾಮದುರ್ಗ ತಾಲೂಕಿನ ಸಾಲಹಳ್ಳಿ ಗ್ರಾಮದ ಶೈಲಾ ಹೊಸಮನಿ ಬಂಧಿತ ನಕಲಿ ಪತ್ರಕರ್ತರು.

ಪತ್ರಕರ್ತರು ಎಂದು ಹೇಳಿಕೊಂಡು ಮೂವರು ಆರೋಪಿಗಳು ರಾಮದುರ್ಗದ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿ ವಿದ್ಯಾವತಿ ಅಮ್ಮಿನಬಾವಿ ಅವರಿಗೆ ಹಣಕ್ಕಾಗಿ ಬ್ಲ್ಯಾಕ್ ಮೆಲ್ ಮಾಡುತ್ತಿದ್ದರು.

ನಿಮ್ಮ ಆಸ್ಪತ್ರೆ ಸ್ವಚ್ಛವಾಗಿಟ್ಟಿಲ್ಲ. ನಮ್ಮ ಹತ್ತಿರ ವಿಡಿಯೋ ಚಿತ್ರೀಕರಣಗಳಿವೆ. ನಾವು ಪ್ರಜಾ ಜಗತ್ತು ಮಾಸ ಪತ್ರಿಕೆಯವರು ಅಂತ ಆವಾಜ್ ಹಾಕಿ ೮೦ ಸಾವಿರಕ್ಕೆ ಬೇಡಿಕೆ.

ಬ್ಲಾಕ್ಮೇಲ್ ತಂತ್ರಕ್ಕೆ ಬೇಸತ್ತ ವೈದ್ಯಾಧಿಕಾರಿ ವಿದ್ಯಾವತಿ ಅಮ್ಮಿನಬಾವಿ ಅವರಿಂದ ನಕಲಿ ಪತ್ರಕರ್ತರ ವಿರುದ್ದ ರಾಮದುರ್ಗ ಪೊಲೀಸರಿಗೆ ದೂರು.