ಸೇಡಂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುವ ಈ ರೇಲ್ವೆ ಹಳಿಯಿಂದ ಬೇಸತ್ತ ಸುತ್ತಮುತ್ತಲಿನ ಜನ

ಸೇಡಂ ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗುವ ಈ ರೇಲ್ವೆ ಹಳಿಯು ಸೇಡಂ ರೈಲ್ವೆ ನಿಲ್ದಾಣದಿಂದ ವಾಸವದತ್ತ ಕಂಪನಿಗೆ ಹಾದು ಹೋಗುವ ರೈಲ್ವೆಗೇಟ್. ಇದು ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ, ಆಸ್ಪತ್ರೆಗಳಿಗೆ ಹೋಗುವ ರೋಗಿಗಳಿಗೆ, ಸರಕಾರಿ ನೌಕರರಿಗೆ, ಖಾಸಗಿ ಉದ್ಯೋಗಿಗಳಿಗೆ, ಹಲವು ದಶಕಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ಓಡಾಡುವ ಸ್ಥಿತಿ ನಿರ್ಮಾಣ ಮಾಡಿದೆ ,ಸೇಡಂ ಪಟ್ಟಣದ ಮಧ್ಯಭಾಗದಲ್ಲಿರುವ ಈ ರೈಲ್ವೆ ಹಳಿಯ ಪಟ್ಟಣದಲ್ಲಿ ಮೂರು ಗೆಟ್ ಗಳನ್ನು ಹೊಂದಿದ್ದು.
(ಗೇಟ್ ನಂಬರ್ 1 ಕೆ.ಈ.ಬಿ ಹತ್ತಿರ),

(ಗೇಟ್ ನಂಬರ್ 2 ಹಳೆಯ ಸರ್ಕಾರಿ ಆಸ್ಪತ್ರೆ ಮುಂದೆ),

(ಗೇಟ್ ನಂಬರ್ 3 ಊಡಗಿ ರಿಂಗ್ ರೋಡ್ ಹತ್ತಿರ)

ಇವು ತಾಲೂಕಿನ ಬೇರೆ ಬೇರೆ ಗ್ರಾಮಗಳಿಂದ ಬರುವ ಶಾಲೆ-ಕಾಲೇಜುಗಳ ಮಕ್ಕಳು, ಸಾರ್ವಜನಿಕರು, ಖಾಸಗಿ ನೌಕರರು, ಸರ್ಕಾರಿ ನೌಕರರು,
ಆಸ್ಪತ್ರೆಗಳಿಗೆ ತೆರಳುವ ರೋಗಿಗಳು ಈ ಎಲ್ಲರಿಗೂ ಮೂರು ರೈಲ್ವೆಗೇಟ್ ಮೂಲಕವೇ ಹಾದು ಹೋಗುವ ಪರಿಸ್ಥಿತಿ ಇವರೆಲ್ಲರದ್ದಾಗಿದ್ದು ತುಂಬಾ ಗೋಜಿನ ಸ್ಥಿತಿಯಲ್ಲಿ ಪ್ರಯಾಣ ಮಾಡುವಂತಾಗಿದೆ. ಸೇಡಂ ರೈಲ್ವೆ, ನಿಲ್ದಾಣದಿಂದ ಈ ಮೂರು
ಗೇಟ್ ಗಳ ಮಾರ್ಗವಾಗಿ ವಾಸವದತ್ತ ಕಂಪನಿಗೆ ಹೋಗುತ್ತದೆ. ಈ ರೈಲ್ವೆ ಹಳಿಯನ್ನು ಸ್ಥಳಾಂತರ ಮಾಡುವ ಬಗ್ಗೆ ಮನವಿ ಸಲ್ಲಿಸಿದರು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸಾರ್ವಜನಿಕರು ಗ್ರಾಮಸ್ಥರು ಪಟ್ಟಣದ ಹಲವಾರು ಮುಖಂಡರು ಬೇಸರ ವ್ಯಕ್ತಪಡಿಸಿದ್ದಾರೆ.

ವರದಿಗಾರರು ಭಗವಂತ ಉಪ್ಪಾರ ಮತ್ತು ಬಸವರಾಜ
ಚೆನ್ನಮ್ಮ ಟೀವಿ ಸೇಡಂ