ಸುರಪೂರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭೇದವಿಲ್ಲದೇ ಮೋಹರಮ್ ಹಬ್ಬವನ್ನು ಆಚರಿಸಲಾಯಿತು

ಯಾದಗಿರ ಜಿಲ್ಲೆಯ ಸುರಪೂರ ತಾಲೂಕಿನ ಹೆಗ್ಗನದೊಡ್ಡಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಭೇದವಿಲ್ಲದೇ ಎಲ್ಲರು ಸಹೋದರ ಮತ್ತು ಸಹೋದರಿಯರು ಎಂಬ ಭಾವನೆ ಇಟ್ಟುಕೊಂಡು ಮೋಹರಮ್ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಮೋಹರಮ್ ಹಬ್ಬದ ವಿಶೇಷ ಎಂದರೆ ಕೆಲವು ಪುರುಷರಿಗೆ ಹಾಗೂ ಮಹಿಳೆಯರಿಗೆ ದೆವ್ವ.ಭೂತ ಏನಾದ್ರೂ ಇದ್ರೆ ಅವು ಮತ್ತೆ ಇವರುಗಳ ಕಡೆ ಬರದ ಹಾಗೆ ಈ ಅಲ್ಲಾಯಿ ದೇವರು ಮಾಡುತ್ತವೆ. ಅಷ್ಟಲ್ಲದೆ ಜನರು ಬೇಡಿಕೊಂಡ ಇಷ್ಠಾರ್ಥವನ್ನು ನೇರವೇರಿಸುತ್ತವೆ.ಇದಕ್ಕಾಗಿ ನಾವು ಎಲ್ಲರೂ ಯಾವುದೇ ಧರ್ಮ ಭೇದವಿಲ್ಲದೇ ಆಚರಣೆ ಮಾಡುತ್ತೇವೆ ಎಂದು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಮಾಳಪ್ಪ ಪೂಜಾರಿ ಹೆಗ್ಗನದೊಡ್ಡಿ ತಿಳಿಸಿದ್ದಾರೆ. ಸ್ಥಳೀಯರಾದ. ಮರುಳಸಿದ್ದ ಶಿಕ್ಷಕರು,ಡಾ.ಅಂಬ್ರೇಶ,ನಿಂಗಣ್ಣ ದೇಸಾಯಿ,ಮಲ್ಲಿನಾಥ ಪಾಟೀಲ,ಲೋಹಿತ ತಿಪನಟಗಿ,ಈರಣ್ಣ ಪತ್ತಾರ,ನಿಂಗಣ್ಣ ಶಿಕ್ಷಕರು ಹಾಗೂ ಗ್ರಾಮದ ಯುವಕರು ಭಾಗವಹಿಸಿದ್ದರು.

ಧರ್ಮರಾಜ್ ಸಿ ಸುಂಬಡ್ ಯಾದಗಿರ ಜಿಲ್ಲಾ ವರದಿಗಾರರು ಚನ್ನಮ್ಮ ಟಿವಿ