ಸಾರ್ವಜನಿಕರಿಂದ ಹೋಂಗಾರ್ಡ್​ಗೆ ಬಿತ್ತು ಗೂಸಾ

ಸಂಚಾರ ನಿಯಮ ಉಲ್ಲಂಘಿಸಿದ ಬೈಕ್​ ತಡೆದಿದ್ದಕ್ಕೆ ಹೋಂಗಾರ್ಡ್​ಗೆ ಬಿತ್ತು ಗೂಸಾ

ದಂಪತಿಯಿಬ್ಬರು ದ್ವಿಚಕ್ರ ವಾಹನದ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಕಂಡ ಹೊಂಗಾರ್ಡ್, ಬೈಕ್ ತಡೆಯಲು ಹೊಗಿದ್ದಾನೆ. ಬೈಕ್​ನ್ನು ಹಿಂದಿನಿಂದ ಹಿಡಿದಿದಕ್ಕೆ ಬೈಕ್​ನಲ್ಲಿ ಸವಾರಿ ಮಾಡುತ್ತಿದ್ದ ದಂಪತಿ ನೆಲಕ್ಕೆ ಬಿದ್ದಿದ್ದಾರೆ.

ಅಂಬೇಡ್ಕರ್ ವೃತ್ತದ ರಸ್ತೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳನ್ನು ಪತ್ತೆ ಹಚ್ಚಿ, ಕೇಸ್ ಹಾಕುತ್ತಿದ್ದ ಪೊಲೀಸ್ ಸಿಬ್ಬಂದಿ ಜತೆಯಲ್ಲಿದ್ದ ಹೊಂಗಾರ್ಡ್​ನನ್ನು ಸಾರ್ವಜನಿಕರು ಥಳಿಸಿದ್ದಾರೆ. ನಗರದ ಅಂಬೇಡ್ಕರ್ ವೃತದಲ್ಲಿ ಇಂದು ದಂಪತಿಯಿಬ್ಬರು ದ್ವಿಚಕ್ರ ವಾಹನದ ಮೇಲೆ ಸಂಚರಿಸುತ್ತಿದ್ದರು. ಈ ವೇಳೆ ಸಂಚಾರ ನಿಯಮ ಉಲ್ಲಂಘಿಸಿರುವುದನ್ನು ಕಂಡ ಹೊಂಗಾರ್ಡ್, ಬೈಕ್ ತಡೆಯಲು ಹೊಗಿದ್ದಾನೆ. ಬೈಕ್​ನ್ನು ಹಿಂದಿನಿಂದ ಹಿಡಿದಿದಕ್ಕೆ ಬೈಕ್​ನಲ್ಲಿ ಸವಾರಿ ಮಾಡುತ್ತಿದ್ದ ದಂಪತಿ ನೆಲಕ್ಕೆ ಬಿದ್ದಿದ್ದಾರೆ.ಸಂಚಾರ ನಿಯಮ ಉಲ್ಲಂಘಿಸಿದ ಬೈಕ್​ ತಡೆದಿದ್ದಕ್ಕೆ ಹೋಂಗಾರ್ಡ್​ಗೆ ಬಿತ್ತು ಗೂಸಾ ಇದನ್ನು ಕಂಡ ಸ್ಥಳೀಯರು ಹೊಂಗಾರ್ಡ್ ಮೇಲೆ ಹಲ್ಲೆ ಮಾಡಿದ್ದಾರೆ. ನಂತರ ಸ್ಥಳದಲ್ಲೇ ಇದ್ದ ಟ್ರಾಫಿಕ್ ಪೊಲೀಸರು ಮಧ್ಯ ಪ್ರವೇಶ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ ಮತ್ತು ಬೈಕ ಮೇಲೆ ಸಂಚಾರಿಸುತ್ತಿದ್ದ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.