ಸಹಕಾರಿ ಸಂಘ ಸಂಸ್ಥೆಗಳು ಒಂದೇ ಸಮುದಾಯಕ್ಕೆ ಸೀಮಿತವಾಗದೆ ನೊಂದವರ ಪರವಾಗಿ ಕೆಲಸ ಮಾಡಬೇಕು.

ನಗರ ಪ್ರದೇಶಗಳಲ್ಲಿ ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಸಹಾಯಹಸ್ತ ಚಾಚುತ್ತಿರುವ ಸಹಕಾರಿ ಸಂಘಗಳು ಹೆಮ್ಮೆಯ ಸಂಗತಿ

ಬಾಗಲಕೋಟ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ಶ್ರೀ ಧನಲಕ್ಷ್ಮಿ ಪತ್ತಿನ ಸಹಕಾರ ಸಂಘ ನಿಯಮಿತ. ಇದರ ಹತ್ತೊಂಬತ್ತನೇ ವಾರ್ಷಿಕ ಮಹಾಸಭೆ ನಡೆಯಿತು.

ಬಡವರಿಗೆ ಮತ್ತು ವ್ಯಾಪಾರಸ್ಥರಿಗೆ, ನ್ಯಾಯ ಒದಗಿಸಿಕೊಟ್ಟು ಒಳ್ಳೆಯ ಸಹಕಾರಿ ಸಂಘ ಸಂಸ್ಥೆಗಳನ್ನು ಹುಟ್ಟುಹಾಕಬೇಕು. ಎಲ್ಲಾ ಸಮುದಾಯದ ಜತೆ ಸೇರಿ ಅವಿನಾಭಾವ ಸಂಬಂಧ ಬೆಳಸಿಕೂಳ್ಳಬೇಕು.

ಪ್ರತಿಯೊಬ್ಬ ಗ್ರಾಹಕರ ಸಹಕಾರವಿದ್ದರೆ ಮಾತ್ರ ಸಹಕಾರಿ ಸಂಘಗಳು ಉತ್ತಮ ರೀತಿಯಲ್ಲಿ ಬೆಳೆಯಲು ಸಾಧ್ಯ.
ಸಂಸ್ಥೆಗಳು ಒಳ್ಳೆಯ ಉದ್ದೇಶಗಳನ್ನು
ಮತ್ತು ಸಿದ್ದಾಂತಗಳನ್ನು ಎಲ್ಲರೂ ಮೊದಲು ತಿಳಿದುಕೊಳ್ಳ ಬೇಕು
ಅವರು ಹಾಕ್ಕಿಕೊಟ್ಟ ಮಾರ್ಗದರ್ಶನ ದಲ್ಲಿ ನಡೆಯಬೇಕು. ಪ್ರತಿಯೊಬ್ಬರು ಸಹಕರಿ ಸಂಘಗಳ ಲಾಭವನ್ನು ಪಡೆಯಬೇಕು ಎಂದು ಶ್ರೀ ಧನಲಕ್ಷ್ಮಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ಚಿದಾನಂದ ಗಾಳಿ ಹೇಳಿದರು.

 

ಇದೇ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಗೈದಿರುವ ರಬಕವಿ ನಗರದ ಕಣ್ಣಿನ ವೈದ್ಯರಾದ ಡಾ. ಪದ್ಮಜಿತ ನಾಡಗೌಡಪಾಟೀಲ.ಮತ್ತು ಪಿಯುಸಿ ವಿಭಾಗದ ಮತ್ತು ಎಸ್ಎಸ್ಎಲ್ಸಿ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುವ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಶ್ರೀ ಧನಲಕ್ಷ್ಮಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ ಮಾಡಿ ಮತ್ತು ಸನ್ಮಾನ ಮಾಡಿ ಗೌರವಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಧನಲಕ್ಷ್ಮಿ ಪತ್ತಿನ ಸಹಕಾರಿ ಸಂಘದ ಉಪಾಧ್ಯಕ್ಷರಾದ ವಿಜಯಕುಮಾರ ಕರಡಿಗುದ್ದಿ. ನಿರ್ದೇಶಕರಾದ ಲೇಸಪ್ಪಾ ಮಟ್ಟಿಕಲ್ಲಿ. ಬಸವರಾಜ ಬಿಳಿಮೀಸಿ. ಶಿವಜಾತ ಉಮದಿ. ಬಸವರಾಜ ಯಂಡಿಗೇರಿ. ರಾಜಶೇಖರ ಕುರ್ಲಿ. ಶ್ರೀಮತಿ ಸುವರ್ಣ ಭಿಲವಡಿ. ಶ್ರೀಮತಿ ಮಾಹಾನಂದ ದಡ್ಡ. ಡಾ. ಸಂಗಪ್ಪ ಸಾಬೋಜಿ. ಭೀಮಪ್ಪ ಭಜಂತ್ರಿ. ಡಾ. ಸಂಗಮೇಶ ಹತ್ತಪಕಿ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಈರಣ್ಣ ಗುಣಕಿ. ರಾಜಕುಮಾರ ಖಪಲಿ .ಮಹೇಶ ಮಟ್ಟಿಕಲ್ಲಿ. ಸದಾನಂದ ಜೋರಾವರ. ಸತೀಶ ಭಿಲವಡಿ. ಸೇರಿದಂತೆ ಮುಂತಾದವರು ಪಾಲ್ಗೊಂಡಿದ್ದರು.

ಪ್ರಕಾಶ ಕುಂಬಾರ
ಚನಮ್ಮ ಟಿವಿ
ಬಾಗಲಕೋಟೆ