ಶಾಸಕತ್ವ ಎಂದರೆ ಮಾರಾಟದ ವಸ್ತುವಲ್ಲ. ಆದರೆ ಅಥಣಿಯನ್ನು ಹಿಂದಿನ ಅನರ್ಹ ಶಾಸಕರು ಸುಮಾರು ೫೦ಕೋಟಿ ರೂ ಗೆ ಮಾರಾಟ ಮಾಡಿದ್ದಾರೆ.

ಶಾಸಕತ್ವ ಎಂದರೆ ಮಾರಾಟದ ವಸ್ತುವಲ್ಲ. ಆದರೆ ಅಥಣಿಯನ್ನು ಹಿಂದಿನ ಅನರ್ಹ ಶಾಸಕರು ಸುಮಾರು ೫೦ಕೋಟಿ ರೂ ಗೆ ಮಾರಾಟ ಮಾಡಿದ್ದಾರೆ. ಆಪರೇಶನ್ ಕಮಲದ ಮೂಲಕ ಶಾಸಕರೆಂದರೆ ಮಾರಾಟದ ವಸ್ತು ಎಂಬುವಂತೆ ವಾತಾವರಣ ನಿರ್ಮಾಣ ಮಾಡಿದ್ದಾರೆ. ಮಾರಾಟವಾದ ಅವರಿಗೆ ನೀವು ಬರುವ ದಿನಗಳಲ್ಲಿ ತಕ್ಕ ಪಾಠಕಲಿಸಬೇಕು ಎಂದು ಹೇಳಿದರು. ಮತದಾರ ಪ್ರಭುವಿಗೆ ಮೋಸಮಾಡಿದ ಪಕ್ಷಾಂತರಿಗಳಿಗೆ ಜನರ ಶಾಪ ತಟ್ಟದೆ ಬಿಡುವುದಿಲ್ಲ ಎಂದು ಹೇಳಿದರು.

ಜನರ ಸಂಕಟ ಅರ್ಥವಾಗಲಿಲ್ಲ

ಶತಮಾನದಲ್ಲಿ ಹಿಂದೆಂದೂ ಕಾಣದಂತಹ ನೆರೆ ಬಂದಾಗ ಜನರ ಮಧ್ಯೆ ಇದ್ದು ಅವರ ಕಣ್ಣೀರು ಒರಿಸುವ ಕೆಲಸ ಮಾಡದೆ ಅವರ ಸಂಕಷ್ಟದ ಸಮಯದಲ್ಲಿ ಸಾಮಾನ್ಯರ ಪರವಾಗಿ ನಿಲ್ಲದೆ ತಮ್ಮ ಸ್ವಾರ್ಥಕ್ಕೆ ಜನರಿಂದ ದೂರವಾದರು. ತಾವು ೫೦ ಕೋಟಿ ರೂ ಪಡೆದ ಹಣದಲ್ಲಿ ಒಂದಿಷ್ಟಾದರೂ ಜನರ ಸೇವೆಗೆ ಉಯೋಗಿಸಬಹುದಿತ್ತು ಎಂದು ಲೇವಡಿ ಮಾಡಿದರು.
ಮಾಜಿ ಸಚಿವ ಸತೀಶ ಜಾರಕಿಹೋಳಿ ಅವರು ಮಾತನಾಡಿ, ಪಕ್ಷ ದೊಡ್ಡದು ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಕಾರ್ಯಕರ್ತರೆ ನಮ್ಮ ಆಸ್ತಿ. ಅವರ ಪ್ರತಿ ಅಭಿಪ್ರಾಯಕ್ಕೆ ಮನ್ನಣೆ ಇದೆ ಎಂದು ಹೇಳಿದರು. ನಿಮ್ಮ ಅನಿಸಿಕೆಯಂತೆ ಅಭ್ಯರ್ಥಿ ಕುರಿತು ಹೈಕಮಾಂಡ್ ಗೆ ಕಳಿಸಲಾಗುವುದು ಎಂದು ಹೇಳಿದರು. ಚುನಾವಣೆಯಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ಎಂದು ಹೇಳಿದರು.
ಮಾಜಿ ಸಚಿವ ವಿರಕುಮಾರ ಪಾಟೀಲ, ಶಾಮ್ ಘಾಟಗೆ, ವಿನಯ ನಾವಲಗಟ್ಟಿ ಲಕ್ಷ್ಮಣ ಚಿಂಗಳೆ, ಅನೀಲ ಸುಣದೋಳಿ, ಟಿಕೇಟ್ ಆಕಾಂಕ್ಷಿಯಾದ ಮಾಜಿ ಜಿ.ಪಂ ಸದಸ್ಯ ಬಸವರಾಜ ಬುಟಾಳೆ, ಧರೆಪ್ಪ ಠಕ್ಕನ್ನವರ, ಗಜಾನನ ಮಂಗಸೂಳಿ, ಸುನಿಲ ಸಂಕ, ಎಸ್.ಕೆ.ಬುಟಾಳೆ, ಸಿದ್ದಾರ್ಥ ಸಿಂಗೆ, ಶ್ರೀಕಾಂತ ಪೂಜಾರಿ, ಸಂಜೀವ ಕಾಂಬಳೆ ಹಾಗೂ ಮುಂತಾದವರು ಇದ್ದರು.

ಗದ್ದಲ, ಗೊಂದಲದ ಗೂಡಾದ ಸಭೆ
ಆರಂಭದಲ್ಲಿ ಸೂಕ್ತ ಅಭ್ಯರ್ಥಿ ಸಲುವಾಗಿ ಅಭಿಪ್ರಾಯ ವ್ಯಕ್ತ ಮಾಡಲು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತ ಪಡಿಸುವಾಗ ಕೆಲವರು ಕೆಲವರ ಪರವಾಗಿ ಘೋಷಣೆ ಕೂಗಲುಯತ್ನಿಸಿದಾಗ, ನೀವು ಹೀಗೆ ಮಾಡಿದರೆ ನಾನು ಸಭೆ ಇಂದ ಎದ್ದು ಹೋಗುವೆ. ಅದಲ್ಲದೆ ಯಾರ ಪರವಾಗಿ ಘೋಷಣೆ ಮಾಡುತ್ತೀರಿ ಅವರನ್ನು ಅಭ್ಯರ್ಥಿ ಎಂದು ಪರಿಗಣಿಸುವುದಿಲ್ಲ ಎಂದು ಎಮ್ ಬಿ ಪಾಟೀಲರು ಖಾರವಾಗಿ ಹೇಳಿದರು. ಆಗ ಮತ್ತೆ ಓರ್ವ ಮಾತನಾಡಿ, ತಮ್ಮ ತಮ್ಮ ಪರವಾಗಿ ಅಭಿಪ್ರಾಯ ಮಂಡನೆ ಮಾಡಲು ಕೆಲವು ಮುಖಂಡರು ಕರೆ ತಂದಿದ್ದಾರೆ ಎಂದು ಹೇಳಿದರು.

16 ಆಕಾಂಕ್ಷಿಗಳು
ಒಟ್ಟು 16 ಜನ ಟಿಕೇಟ್ ಆಕಾಂಕ್ಷಿಗಳು ಇದ್ದರು. ಅವರನ್ನು ಮುಖಂಡರು ಒಬ್ಬೊಬ್ಬರನ್ನಾಗಿ ಕರೆದು ಗುಪ್ತವಾಗಿ ಸಂದರ್ಶನ ಮಾಡಿದರು. ನಂತರ ಹೊರಗೆ ಬಂದು ಎಂ.ಬಿ. ಪಾಟೀಲರು 16 ಜನರ ಪೈಕಿ ಓರ್ವ ವ್ಯಕ್ತಿಗೆ ಟಕೇಟ್ ಸಿಗುವುದು. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಆಗ ಪಕ್ಷ ವಿರೋಧಿ ಚುಟುವಟಿಕೆ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಆಣೆ ಪ್ರಮಾಣ
16 ಜನರಿಂದ ಒಗ್ಗಟ್ಟಗಾಗಿ ಕೆಲಸ ಮಾಡುವೆವು ಎಂದು ಆಣೆ ಮಾಡಿಸಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಆಗ ಎಂ.ಬಿ.ಪಾಟೀಲರು ಎಲ್ಲರನ್ನು ಮೇಲೆ ಕರೆದು ಒಗ್ಗಟಾಗಿ ಕೆಲಸ ಮಾಡುತ್ತೇವೆ ಎಂದು ಕೈ ಮೇಲೆ ಎತ್ತಿ ಆಣೆ ಮಾಡಿರಿ ಎಂದು ಹೇಳಿದರು. ಆದರೆ ಎಲ್ಲ ಆಕಾಂಕ್ಷಿಗಳು ವೇದಿಕೆಯ ಮೇಲೆ ಬಂದು ಕೈ ಮಾಡಿದರೇ ಹೊರತು ಯಾರೂ ಆಣೆ ಮಾಡಲಿಲ್ಲ.
ಆಪರೇಶನ ಕಮಲ ಪ್ರಜಾಪ್ರಭುತ್ವಕ್ಕೆ ಒಂದು ಕಳಂಕ ಇದರ ವಿರುದ್ದ ನಾವು ಹೋರಾಟ ಮಾಡಬೇಕಾಗಿದೆ. ಈ ಚುನಾವಣೆ ಬರಲು ನಾವು ಕಾಂಗ್ರೇಸ್ ನಾಯಕರೇ ಕಾರಣ. ಆಗ ಸಮರ್ಥ ವ್ಯಕ್ತಿಗೆ ಟಿಕೇಟ್ ನೀಡಿದ್ದರೆ ಈ ಮತಕ್ಷೇತ್ರಕ್ಕೆ ಉಪಚುನಾವಣೆ ಬರುತ್ತಿರಲಿಲ್ಲ. ಅದಕ್ಕಾಗಿ ಕಾರ್ಯಕರ್ತರಲ್ಲಿ ಕ್ಷಮೆಕೇಳುವೆ ಎಂದು ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಅವರು ಮಂಗಳವಾರ ಸಂಜೆ ಶಿವಣಗಿ ಸಂಸ್ಕೃತಿಕ ಭವನದಲ್ಲಿ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಜನಾಭಿಪ್ರಾಯ ಸಂಗ್ರಹಣೆಯ ಸಲುವಾಗಿ ಆಯೋಜಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ, ಕಾರ್ಯಕರ್ತರೇ ನಮ್ಮ ಶಕ್ತಿ. ಅವರಿಂದ ನಾವು ನಾಯಕರಾಗಿದ್ದೇವೆ. ನಿಮ್ಮ ಒಗ್ಗಟ್ಟಿನ ಆರ್ಶಿವಾದ ನಮ್ಮ ಪಕ್ಷದ ಮೇಲೆ ಇರಲಿ ನಾನು ಇಲ್ಲಿ ಯಾರ ಪರವಾಗಿಯೂ ಇಲ್ಲ. ಯಾರ ವಿರೋಧಿಯೂ ಅಲ್ಲ. ಜನಾದೇಶದ ಮೇಲೆ ಉಪಚುನಾವಣೆಗೆ ಸೂಕ್ತ ಅಭ್ಯರ್ಥಿ ಆಯ್ಕೆ ಮಾಡುತ್ತೇವೆ. ಈ ಚುನಾವಣೆಯನ್ನು ನಾವು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದೇವೆ. ಅಥಣಿ, ಕಾಗವಾಡ ಮತ್ತು ಗೋಕಾಕ ಈ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಖಚಿತ. ೧೫ ಕ್ಷೇತ್ರಗಳ ಪೈಕಿ ೧೨ ಕ್ಷೇತ್ರಗಳಲ್ಲಿ ಗೆಲವು ಖಚಿತ. ಪಕ್ಷ ದ್ರೋಹ ಮಾಡಿದವರನ್ನು ಜನರು ಕ್ಷಮಿಸುವುದಿಲ್ಲ ಎಂದು ಖಾರವಾಗಿ ಹೇಳಿದರು.