ವಾಸವದತ್ತ ಸಿಮೆಂಟ್ ಕಂಪನಿಯಲ್ಲಿ ಕಾರ್ಮಿಕರಿಗೆ ಬೋನಸ್ ಕೊಡದಿದ್ದ ಕಾರಣ ಧರಣಿ ಸತ್ಯಾಗ್ರ

ಸೇಡಂ ವಾಸವದತ್ತಾ ಸಿಮೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ದೀಪಾವಳಿ ಹಬ್ಬ ದ ಬೋನಸ್ ನ್ನು ಕೊಡದೆ ಇರುವ ಕಾರಣ ಭಾರತೀಯ ಮಜದೂರ ಸಂಘದ ವಾಸವದತ್ತಾ ವರ್ಕರ್ಸ್ ಯೂನಿಯನ್ ಅಧ್ಯಕ್ಷರಾದ ಅನೀಲಕುಮಾರ ಪಾಟೀಲ ತೆಲ್ಕೂರ ನೇತೃತ್ವದಲ್ಲಿ ಕಾರ್ಖಾನೆಯಲ್ಲಿ ಕಾರ್ಮಿಕರಿಗೆ ಸಿಗಬೇಕಾದ ನ್ಯಾಯವನ್ನು ಕೊಡಿಸಲು ಕಂಪನಿಯ ಮ್ಯಾನೇಜಮೆಂಟ್ ವಿರುದ್ದ ವರ್ಕರ್ಸ್ ಗೆ ಸಿಗಬೇಕಾದ ಬೋನಸ್ ಅನ್ನು ಕೂಡಲೆ ನೀಡಬೇಕೆಂದು ಘೋಷಣೆಯನ್ನು ಕೂಗುತ್ತ ಕಂಪನಿ ಬಂದ ಮಾಡಿ ಬೃಹತ್ ಪ್ರತಿಭಟನೆ ಮಾಡಲಾಯಿತು…
ಮಾಜಿ ಪುರಸಭೆ ಅಧ್ಯಕ್ಷರಾದ ಯಕ್ಬಲ್ ಖಾನಸಾಬ ಹಾಗೂ ಪುರಸಭೆ ಸದಸ್ಯರಾದ ಶ್ರೀನಿವಾಸ್ ಬಳ್ಳಾರಿ ಹಾಗೂ ಶಿವಾನಂದ ಸ್ವಾಮಿ, ಲಾಲು ರಾಠೋಡ್, ಸುನೀಲ್,ರಾಘು
ಹಾಬಳ ಟಿ, ಇನ್ನೂ ಅನೇಕ ಕಾರ್ಮಿಕರ, ಅನೇಕ ಮುಖಂಡರು ಪಾಲ್ಗೊಂಡಿದ್ದರು…
ಈ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಕಾರ್ಮಿಕರು ಬೆಂಬಲವನ್ನು ಸೂಚಿಸಿದರು.

ವರದಿಗಾರರು> ಭಗವಂತ ಉಪ್ಪಾರ ಮತ್ತು ಬಸವರಾಜ