ಮೋದಿಗೆ ಮೃತ್ಯು ಭಯ!: ಹಾಸನಾಂಬ ದೇವಾಲಯದಲ್ಲಿ ಭವಿಷ್ಯ

ಮೋದಿಗೆ ಮೃತ್ಯು ಭಯ!: ಹಾಸನಾಂಬ ದೇವಾಲಯದಲ್ಲಿ ಭ್ರಹ್ಮಾಂಡ ಗುರೂಜಿ ಭವಿಷ್ಯ

ದೇಶದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶೀಘ್ರದಲ್ಲೇ ಮೃತ್ಯು ಗಂಡಾಂತರ ಎದುರಾಗಲಿದೆ!. ಹೀಗೆಂದು ಭವಿಷ್ಯ ನುಡಿದವರು ಬೇರಾರೂ ಅಲ್ಲ ಬ್ರಹ್ಮಾಂಡ ಗುರೂಜಿ ಎಂದೇ ಹೆಸರಾಗಿರುವ ನರೇಂದ್ರ ಬಾಬು ಶರ್ಮ. ಶುಕ್ರವಾರ ಹಾಸನಾಂಬದೇವಿಯ ಆಶೀರ್ವಾದ ಪಡೆದ ಇವರು, ಡಿಕೆಶಿ ಮುಂದಿನ ಹತ್ತು ವರ್ಷಗಳಲ್ಲಿ ಮುಂಖ್ಯಮಂತ್ರಿ ಆಗೇ ಆಗ್ತಾರೆ ಎಂದು ಹೇಳಿದ್ದಾರೆ.

ಹಾಸನ: ಪ್ರಧಾನಿ ನರೇಂದ್ರ ಮೋದಿಗೆ ಈಗ ದೊಡ್ಡ ಗಂಡಾಂತರ ಕಾದಿದೆ. ದೈವೀಕ ಕಾರ್ಯಗಳಿಂದ ಪರಿಹಾರ ಕಂಡುಕೊಳ್ಳದೇ ಹೋದ್ರೆ ಮೃತ್ಯು ಕೂಡ ಎದುರಾಗಬಹುದು. ಮೋದಿ ಅವರು ಈ ಗಂಡಾಂತರದಿಂದ ಪಾರಾಗಿಬಿಟ್ಟರೆ ಇನ್ನು ಎರಡೂವರೆ ವರ್ಷ ಅವರಿಗೆ ಯಾವುದೇ ಭಯವಿಲ್ಲ ಎಂದು ಬ್ರಹ್ಮಾಂಡ ಗುರೂಜಿ ನರೇಂದ್ರ ಬಾಬು ಶರ್ಮ ಭವಿಷ್ಯ ನುಡಿದಿದ್ದಾರೆ.
ಶುಕ್ರವಾರ ಹಾಸನಕ್ಕೆ ಆಗಮಿಸಿ ಹಾಸನಾಂಬೆಯ ದರ್ಶನ ಪಡೆದ ಇವರು ಸುದ್ದಿಗಾರರೊಂದಿಗೆ ಮಾತನಾಡಿ, ನವೆಂಬರ್ 4 ರ ನಂತರ ಮೋದಿಗೆ ಗಂಡಾಂತರ ಇದೆ. ಅವರು ಈ ಅವಧಿಯಲ್ಲಿ ಅಪಮೃತ್ಯು ಗಂಡಾಂತರದಿಂದ ಪಾರಾದರೆ ಇನ್ನೂ ಎರಡು ಮುಕ್ಕಾಲು ವರ್ಷ ಪ್ರಧಾನಿಯಾಗಿ ಇರ್ತಾರೆ ಎಂದು ಹೇಳಿದರು.

ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ
ರಾಜ್ಯ ರಾಜಕೀಯ ಕುರಿತಂತೆಯೂ ಭವಿಷ್ಯ ನುಡಿದಿರುವ ಬ್ರಹ್ಮಾಂಡ ಗುರೂಜಿ, ಹಿಂದೆ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದ ಯಾವೊಬ್ಬ ವ್ಯಕ್ತಿಯೂ ಮುಂದೆ ಅಧಿಕಾರಕ್ಕೆ ಬರುವುದಿಲ್ಲ. ಮತ್ತೆ ಹೊಸ ಸರ್ಕಾರ ಬಂದರೆ ಹೊಸಬರೇ ಸಿಎಂ ಆಗ್ತಾರೆ. ಯಾವುದೇ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರಲ್ಲ ಎಂದು ಗುರೂಜಿ ಭವಿಷ್ಯ ನುಡಿದಿದ್ದಾರೆ.

ಡಿಕೆಶಿ ಸಿಎಂ‌ ಆಗೋದು ಖಚಿತ
ಯಡಿಯೂರಪ್ಪಗೆ ಪೂರ್ಣ ಅವಕಾಶ ಇಲ್ಲವೇ ಇಲ್ಲ. ಕೋಟಿ ಕೋಟಿ ಹಣ ಮಾಡಿದವರು ಕೃಷ್ಣ ಜನ್ಮಸ್ಥಳಕ್ಕೆ ಸೇರಲೇ‌ ಬೇಕು. ಮುಂದಿನ ಹತ್ತು ವರ್ಷದಲ್ಲಿ ಒಮ್ಮೆ ಡಿಕೆಶಿ ಸಿಎಂ‌ ಆಗೋದು ನಿಶ್ಚಿತ. ಹತ್ತು ವರ್ಷಗಳೊಳಗೆ ಒಮ್ಮೆಯಾದರೂ ಐದು ವರ್ಷಗಳ ಅವಧಿಗೆ ಡಿಕೆಶಿ ಸಿಎಂ ಆಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಮುಂದೆ ಇನ್ನೂ ಹೆಚ್ಚಿನ ಪ್ರಕೃತಿ ವಿಕೋಪಗಳು ಆಗಲಿವೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದೂ ಹೇಳಿದ್ದಾರೆ.

2107ರಲ್ಲೂ ಇದೇ ಭವಿಷ್ಯ ನುಡಿದಿದ್ದರು.

ಬ್ರಹ್ಮಾಂಡ ಗುರೂಜಿ 2107ರಲ್ಲಿ ಹಾಸನಾಂಬೆ ದೇವಾಲಯದಲ್ಲಿಯೇ ಮೋದಿಗೆ ಗಂಡಾಂತರ ಇದೆ ಎಂದು ಹೇಳಿದ್ದರು. ಮೋದಿ ಅವರದ್ದು ವೃಶ್ಚಿಕ ರಾಶಿ. ಅದರಲ್ಲಿನ ದೋಷ ಇದಕ್ಕೆ ಕಾರಣ ಎಂದಿದ್ದಾರೆ. ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್‍ಡಿಕೆ ಕಿಂಗ್ ಮೇಕರ್ ಆಗಲಿದ್ದಾರೆ. ಅವರ ಮೇಲೆ ಉತ್ತರ ಕರ್ನಾಟಕ ಜನ ನಂಬಿಕೆ ಇಟ್ಟಿದ್ದಾರೆ. ಆದರೆ ಅವರು ತಂದೆ ಮಾತು ಕೇಳಬೇಕು. ಆರೋಗ್ಯ ಕಾಪಾಡಿಕೊಳ್ಳಬೇಕು. ಮತ್ತೊಮ್ಮೆ ಸಿಎಂ ಆಗೋ ಯೋಗ ಅವರಿಗಿದೆ. ಸಿಎಂ ಸಿದ್ದರಾಮಯ್ಯ ಈವರೆಗೆ ಮಾಡಿರುವ ತಪ್ಪು ಸರಿಪಡಿಸಿಕೊಳ್ಳಬೇಕು. ಅವರ ಸುತ್ತಮುತ್ತ ಕೆಲವು ಕಚಡಾ ಮಂತ್ರಿಗಳಿದ್ದಾರೆ ಅಂದಿದ್ದರು. ಕಾಕತಾಳೀಯ ಎಂಬಂತೆ ಅದು ನಿಜವೂ ಆಗಿದೆ.