ಮಹಾಮಾರಿ ಕೋವಿಡ್;:ಒಂದೇ ದಿನ 53 ಪಾಸಿಟವ್

ಭಾನುವಾರ : ರಾಜ್ಯದಲ್ಲಿ ಒಂದೇ ದಿನ 53 ಕೇಸ್ ದೃಢ

ಹುಬ್ಬಳ್ಳಿ; ರಾಜ್ಯದಲ್ಲಿ ಮಹಾಮಾರಿ ಕರೋನಾಅಟ್ಟಹಾಸ ಮುಂದುವರೆದಿದ್ದು, ಭಾನುವಾರ ಸೊಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ.
ಕಳೆದ ಮೂರು ದಿನಗಳಿಂದ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಲೇ ಇದೆ.
ದೆಹಲಿಯ ನಿಜಾಮೋದ್ದಿನ್ ಪ್ರದೇಶದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಿ ನಂತರ ಗುಜರಾತ್ ನ ಅಹಮದಾಬಾದಗೆ ಹೋಗಿದ್ದರು.
ಅವರನ್ನು ಗುಜರಾತ್ ಸರಕಾರ ಮರಳಿ ಕಳುಹಿಸಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಅವರನ್ನು ಅಲ್ಲಿ ಕ್ವಾರಂಟೆನ್ ಮಾಡಿ ಆನಂತರ ಕಳುಹಿಸಲಾಗಿತ್ತು.
ಆದರೂ ಇದೀಗ ಶಿಕಾರಿಪುರದ 7 ಜನರಲ್ಲಿ ಹಾಗೂ ತೀರ್ಥ ಹಳ್ಳಿಯ ಒಬ್ಬರಿಗೆ ಸೋಂಕು ಹರಡಿದೆ.
ಆ ಮೂಲಕ ಶಿವಮೊಗ್ಗ ಜಿಲ್ಲೆಯ 8 ಜನರಲ್ಲಿ ಕರೋನಾ ಸೋಂಕು ಕಾಣಿಸಿಕೊಂಡಂತಾಗಿದೆ. ಇದರಿಂದಾಗಿ ಹಸಿರುವಲಯದಲ್ಲಿದ್ದ ಮಲೆನಾಡಿಗೂ ಕರೋನಾ ವಕ್ಕರಿಸಿದಂತಾಗಿದೆ.
ಕಲಬರುಗಿಯ ಅಫಜಲಪುರದಲ್ಲಿ ಬಡಿಗನಿಗೆ ಬಂತು ಕರೋನಾ. 16 ಜನ ಒಂದೇ ಕುಟುಂಬದವರು ಮನೆಯಲ್ಲಿ ಇದ್ದರು.
ಕಿರಾಣಿ ಅಂಗಡಿ ನಡೆಸುತ್ತಿದ್ದ ಸೋಂಕಿತನ ಅಣ್ಣ. ತಮ್ಮನ ಜೊತೆಗೆ ಇದ್ದಅವನಿಗೆ ತಗುಲಿದೆ. ಅಂಗಡಿಗೆ ಹೋಗಿ ಬಂದವರಿಗೆ ಇದೀಗ ಆತಂಕ ಶುರುವಾಗಿದೆ. ಪಾರ್ಸಲ ಪಡೆದವರು ಭಯಭೀತಿರಾಗಿದ್ದಾರೆ.
ಇನ್ನೂ ಬೆಳಗಾವಿಯ ಜಿಲ್ಲೆಯ 22 ಜನರಿಗೆ ಕರೋನಾ ಸೋಂಕು ತಗುಲಿದೆ. ಈ ಪೈಕಿ ಒಂದು ಮೂರು ವರ್ಷದ ಮಗುವಿದೆ. ಅವರೆಲ್ಲರೂ ಅಜ್ಮೀರ್ ದರ್ಗಾಕ್ಕೆ ಹೋಗಿ ಬಂದಿದ್ದರು ಎಂದು ಗೊತ್ತಾಗಿದೆ.
ಅದೇ ರೀತಿ ಬಾಗಲಕೋಟೆಯ 8 ಪ್ರಕರಣಗಳು ಹಾಗೂ ದಾವಣಗೆರೆಯ ಒಬ್ಬನಿಗೆ ಸೋಂಕು ಹರಡಿದೆ. ಅವರೆಲ್ಲರೂ ಕೂಡ ಅಜ್ಮೀರ್ ದರ್ಗಾಕ್ಕೆ ಹೋಗಿಬಂದಿದ್ದರು ಎಂದು ಗೊತ್ತಾಗಿದೆ.
ಅವರನ್ನು ಮುಂಜಾಗ್ರತ ಕ್ರಮವಾಗಿ ಹಾಸ್ಟೆಲ್ ನಲ್ಲಿ ಕ್ವಾರಂಟನ್ ಮಾಡಲಾಗಿತ್ತು. ಕರೋನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರನ್ನು ನಿಯೋಜಿತ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿದೆ.
ತಾತನಿಂದಲೇ ಮೊಮ್ಮಗನಿಗೆ ಸೋಂಕು ಹರಡಿದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದಲ್ಲಿ ನಡೆದಿದೆ. 71 ವರ್ಷದ ವೃದ್ದನಿಂದ 22 ವರ್ಷದ ಮೊಮ್ಮಗನಿಗೆ ಬಂದಿದೆ. ಸೋಂಕಿತ 790 ಎಂದು ಗುರುತಿಸಲಾಗಿದೆ
ರಾಜ್ಯದಲ್ಲಿ ಒಂದೇ ದಿನ 53 ಪ್ರಕರಣ ಕಂಡು ಬಂದಿದ್ದು, 22 ಮಹಿಳೆಯರು, 14 ವರ್ಷದ ಕೆಳಗಿನ 8 ಮಕ್ಕಳಿಗೆ ಹರಡಿದೆ. ಬಾಗಲಕೋಟೆ 8 ಜನರ ಪೈಕಿ 2 ವರ್ಷದ ಮಗುವಿಗೆ ಬಂದಿದೆ.
ಅದೇ ರೀತಿ ಶಿವಮೊಗ್ಗ 8, ಬಾಗಲಕೋಟೆ 8, ಕಲಬುರಗಿಯಲ್ಲಿ 3 , ಉತ್ತರಕನ್ನಡದಲ್ಲಿ 7, ಬೆಳಗಾವಿ 22, ದಾವಣಗೆರೆ 1, ಚಿಕ್ಕಬಳ್ಳಾಪುರ 1, ಬೆಂಗಳೂರು 3 ಪ್ರಕರಣ ಬೆಳಕಿಗೆ ಬಂದಿವೆ. ಹೀಗೆ ಒಂದೇ ದಿನ 53 ಪ್ರಕರಣ ದೃಢಪಟ್ಟಿರುವುದು ರಾಜ್ಯದ ಪಾಲಿಗೆ ಕರಾಳ ಭಾನುವಾರವಾದಂತಾಗಿದೆ.