ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆಯನ್ನು ಗುರ್ತಿಸುವುದೇ ಪ್ರತಿಭಾ ಕಾರಂಜಿ : ಸಿ ಜೆ ಕುಮಾರ್

ಮಕ್ಕಳಲ್ಲಿ ಅಡಗಿರುವ ಸೃಜನಶೀಲತೆಯನ್ನು ಗುರ್ತಿಸುವುದೇ ಪ್ರತಿಭಾ ಕಾರಂಜಿ

ಮಂಡ್ಯ ನಾಗಮಂಗಲ: ಬಾಲ್ಯದಿಂದಲೇ ಮಕ್ಕಳಲ್ಲಿ ಹಲವಾರು ಪ್ರತಿಭೆಗಳು ಅಡಗಿರುತ್ತವೆ.ಆದರೆ ಅದನ್ನು ಗುರ್ತಿಸಿ ಬೆಳೆಸಿದಾಗ ಮಾತ್ರವೇ ಸೃಜನಶೀಲತೆ ಬೆಳಕಿಗೆ ಬರುತ್ತದೆ.

ಅಂತಹ ಪ್ರತಿಭೆಗಳನ್ನು ಗುರ್ತಿಸಿ ಬೆಳೆಸುವ ಕೆಲಸವನ್ನು ಪ್ರತಿಭಾ ಕಾರಂಜಿ ಮಾಡುತ್ತಿದೆ ಎಂದು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ಸಿ ಜೆ ಕುಮಾರ್ ಹೇಳಿದರು.

ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕ್ಲಷ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇಂದು ಹಲವಾರು ಸಾಂಸ್ಕೃತಿಕ ಕಲೆಗಳು ನಾಶವಾಗುತ್ತಿವೆ.ಇಂತಹ ಕಲೆಗಳನ್ನು ಪುನಶ್ಚೇತನಗೊಳಿಸಬೇಕು ಎಂದು.

ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ.ಮಕ್ಕಳ ಪ್ರತಿಭೆಯನ್ನು ಗುರ್ತಿಸಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಅಲ್ಲದೇ ಮಕ್ಕಳು ಸೋಲು ಗೆಲುವುಗಳನ್ನು ಮಾನದಂಡವಾಗಿ ಪರಿಗಣಿಸದೇ ಸ್ಪರ್ಧೆಯಲ್ಲಿ ಭಾಗವಹಿಸುವುದೇ ಮುಖ್ಯವಾಗಿರುತ್ತದೆ.ಮಕ್ಕಳ ಪ್ರತಿಭೆಯನ್ನು ಗುರ್ತಿಸುವಲ್ಲಿ ಶಿಕ್ಷಕರು ಹೆಚ್ಚು‌ ಶ್ರಮಿಸಬೇಕು‌.

ಆಗ ಮಕ್ಕಳ ತಮ್ಮ ಪ್ರತಿಭೆಯಿಂದ ಉತ್ತಮ ಸಾಧನೆ ಮಾಡಲು ಸಾಧ್ಯ.ಆದ್ದರಿಂದ ಪೋಷಕರು ಮಕ್ಕಳ ಆಸಕ್ತಿಯನ್ನು ಪರಿಗಣಿಸಿ ಬೆಳೆಸಬೇಕಾಗಿದೆ ಎಂದರು.

ಮಾಯಗೋನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ಶಿವರಾಮೇಗೌಡ ಮಾತನಾಡಿ ಮಕ್ಕಳು ಯಾವುದೇ ಅಂಜಿಕೆ ಇಲ್ಲದೇ ಸ್ಪರ್ಧೆಯಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ.

ಪ್ರತಿಭೆಯಿದ್ದ ವ್ಯಕ್ತಿಯನ್ನು ಇಡೀ ಪ್ರಪಂಚವೇ ಗೌರವಿಸುತ್ತದೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಶುಭಕೋರಿದರು.

ಕಾರ್ಯಕ್ರಮದಲ್ಲಿ 14 ಶಾಲೆಯ 250 ಮಕ್ಕಳು ಭಾಗವಹಿಸಿದ್ದರು.
ಅಲ್ಲದೇ ಕಾರ್ಯಕ್ರಮದಲ್ಲಿ ಜಾನಪದ ನೃತ್ಯ ,ಪೂಜೆ ಕುಣಿತ ತಂಡಗಳು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.

ಅಲ್ಲದೇ ವಿವಿಧ ಬಗೆಯ ಆಕರ್ಷಕ ಉಡುಪುಗಳನ್ನು ತೊಟ್ಟ ಚಿಣ್ಣರು ಎಲ್ಲರ ಗಮನ ಸೆಳೆದರು.ಜೊತೆಗೆ ಪುಟಾಣಿಗಳು ಸ್ಪರ್ಧೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡು ಮೆಚ್ಚುಗೆಗೆ ಪಾತ್ರರಾದರು.

ಎಸ್ ಡಿ ಎಂ ಸಿ ಅಧ್ಯಕ್ಷ ಕುಮಾರ್,ಉಪಾಧ್ಯಕ್ಷೆ ಶೀಲಾ,ಗ್ರಾಮ ಪಂಚಾಯತಿ ಸದಸ್ಯರಾದ ಶಿವಣ್ಣ ,ಪುಟ್ಟಮ್ಮ, ಸಮೂಹ ಸಂಪನ್ಮೂಲ ವ್ಯಕ್ತಿ ಸುನಂದಾ,

ಶಿಕ್ಷಣ ಸಂಯೋಜಕರು ರವಿ ಕುಮಾರ್‌,ಮುಖ್ಯ ಶಿಕ್ಷಕ ಮಂಜಯ್ಯ, ಶಿಕ್ಷಕರಾದ ಬಿ ಆರ್ ನಂದಕಿಶೋರ್ ,ಮಂಜುಳಾ,ಸರಸ್ವತಿ, ಪುಷ್ಪಾ ಮತ್ತು ಎಸ್