ಬೆನಕನಹಳ್ಳಿ ಗ್ರಾಮದಲ್ಲಿ ಗಣೇಶೋತ್ಸವ.

ಕಲ್ಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಗಣೇಶೋತ್ಸವ ಪ್ರತಿವರ್ಷದಂತೆ ಈ ವರ್ಷವೂ ಭರ್ಜರಿಯಾಗಿ ಆಚರಿಸಲಾಗುತ್ತಿದೆ. ಹೆಸರೇ ಸೂಚಿಸುವಂತೆ ಬೆನಕನಹಳ್ಳಿ ಗ್ರಾಮದಲ್ಲಿ ನೈಸರ್ಗಿಕ ಗಣಪನನ್ನು ಖುದ್ದಾಗಿ ಗ್ರಾಮದ ಸ್ವಾಮೀಜಿಯವರು 21 ದಿನಗಳ ಕಾಲ ಸತತವಾಗಿ ಒಂದೊಂದು ಭಾಗ ಗಣೇಶನನ ತಯಾರಿಸುವ ಪದ್ಧತಿ ಪೂರ್ವಜರ ಕಾಲದಿಂದಲೂ ನಡೆದು ಬಂದಿದೆ. ಈಗಲೂ ಗ್ರಾಮದಲ್ಲಿ ಅದೇ ವಾಡಿಕೆ ಮುಂದುವರಿಸಲಾಗುತ್ತದೆ. ನಾನಾ ಭಾಗಗಳಿಂದ ನಾನಾ ಜಿಲ್ಲೆಗಳಿಂದ ನಾನಾ ಗ್ರಾಮಗಳಿಂದ ಇಲ್ಲಿಗೆ ಬಂದು ಗಣೇಶನ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಇನ್ನು 21ನೇ ದಿನ ಭರ್ಜರಿಯಾಗಿ ಗ್ರಾಮದ ನಾನಾ ಬಿದಿಗಳ ಮುಖಾಂತರ ಡಿಜೆ ಮತ್ತು ವಾದ್ಯ ಮೇಳದೊಂದಿಗೆ ಡೊಳ್ಳು ಕುಣಿತದೊಂದಿಗೆ ಭಜನೆ ಮಂಡಳಿಯೊಂದಿಗೆ ಕುಣಿದು ಕುಪ್ಪಳಿಸುತ್ತ ಊರ ಮುಂದಿನ ಬಾವಿಯಲ್ಲಿ ಗಣೇಶನನ್ನು ಭರ್ಜರಿಯಾಗಿ ಪೂಜೆ ಮಾಡುವ ಮುಖಾಂತರ ವಿಸರ್ಜಿಸಲಾಗುವುದು. ಈ ಗಣೇಶೋತ್ಸವದ ಸಂಪೂರ್ಣ ಉಸ್ತುವಾರಿಯನ್ನು ಗ್ರಾಮದ ಮುಖಂಡರಾದ ರೆಡ್ಡಿ ಪಾಟೀಲ್ ಎಂಬಿ ಪಾಟೀಲ್ ಮತ್ತು ಇನ್ನೂ ಅನೇಕ ಗ್ರಾಮದ ಎಲ್ಲಾ ಸದ್ಭಕ್ತರು ಜಾತಿ ಭೇದ ಭಾವವಿಲ್ಲದೆ ಭರ್ಜರಿಯಾಗಿ ಗಣೇಶೋತ್ಸವವನ್ನು ಆಚರಿಸಲಾಗುವುದು.


ವರದಿಗಾರರು> ಕ್ಯಾಮೆರಾ ಮ್ಯಾನ್ ಬಸವರಾಜ ಜೋತೆ ಭಗವಂತ ಉಪ್ಪಾರ ಚೆನ್ನಮ್ಮ ಟೀವಿ ಸೇಡಂ.