ಬಡ ಜನರಿಗಾಗಿ ಕೊಟ್ಯಾಂತರ ರೂಪಾಯಿ ಹಣ ಸುರಿದು ಸುಸಜ್ಜಿತ ಕಟ್ಟಡಗಳನ್ನ ನಿರ್ಮಾಣ ಮಾಡುತ್ತಿದೆ, ಆದ್ರೆ ಅಲ್ಲಿ ರೋಗಿಗಳಿಗೆ ವರದಾನವಾಗ ಬೇಕಿದ್ದ ಆಸ್ಪತ್ರೆಗಳು ವೈದ್ಯರಿಲ್ಲದೇ ಪುಂಡ ಪೋಕರಿಗಳ ತಾಣವಾಗಿದ್ದು, ಅಲ್ಲಿಗೆ ಬರುವ ಜನ್ರುಸಹ ಬಾರದಂತಾಗಿದ್ದು, ನೂತನ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಬೀಕೊ ಎನ್ನುತ್ತಿದೆ.

– ಹೀಗೆ ಒಂದು ಕಡೆ ಎಲ್ಲಂದರಲ್ಲಿ ಬಿದ್ದ ಸರಾಯಿ ಪಾಕೇಟ್ ಗಳು, ಮತ್ತೊಂದು ಕಡೆ ಮನೆ ಮಾಡಿಕೊಂಡಿರುವ ಬೀದಿ ನಾಯಿಗಳು, ಇನ್ನೊಂದು ಕಡೆ ಬಿಕೋ ಎನ್ನುತ್ತಿರುವ ಆಸ್ಪತ್ರೆ, ಹೌದು ಈದೇಲ್ಲಾ ಕಂಡು ಬಂದಿದ್ದು, ಬೀದರ್ ಜಿಲ್ಲೆಯ ಹುಮನಾಬಾದ್ ತಾಲೂಕಿನ ನಿರ್ಣಾಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ..

ವಾಯ್ಸ್ಓವರ್:- ಹೌದು ಈ ಹಿಂದೆ ನಿರ್ಣಾ ಗ್ರಾಮದಲ್ಲಿದ್ದ ಹಳೆ ಕಟ್ಟಡದಲ್ಲಿ ಯಾವೂದೆ ಮೂಲ ಸೌಕರ್ಯಗಳಿಲ್ಲದೆ ರೋಗಿಗಳು ಪರದಾಡುತ್ತಿದ್ದರು, ಹೀಗಾಗಿ ರಾಜ್ಯ ಸರ್ಕಾರ ಹೊಸದೊಂದು ಕಟ್ಟಡ ನಿರ್ಮಾಣಕ್ಕೆ ಮುಂದಾಗಿ ಬರೊಬ್ಬರಿ ಒಂದು ಕೋಟಿ 30 ಲಕ್ಷ ವ್ಯಚ್ಚದಲ್ಲಿ ನೂತನವಾದ ಕಟ್ಟಡವನ್ನ ನಿರ್ಮಾಣ ಮಾಡಿತ್ತು,ಮೈತ್ರಿ ಸರ್ಕಾರದ ಅವಧಿಯಲ್ಲಿ ಸಹಕಾರಿ ಸಚಿವರಾಗಿರದ್ದ ಬಂಡೆಪ್ಪಕಾಂಶಪೂರ್ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಿದ್ರು, 8 ತಿಂಗಳು ಕಳೆದ್ರು ಸಹ ಇಲ್ಲಿ ಯಾರೊಬ್ಬ ವೈದ್ಯಾಧೀಕಾರಿಗಳು ಸರಿಯಾಗಿ ಆಸ್ಪತ್ರೆಗೆ ಬಾರದ ಕಾರಣ ಇಲ್ಲಿಗೆ ಬರುವ ರೋಗಿಗಳು ಹುಮುನಾಬಾದ್,ಮನ್ನಾಖೇಳಿ ಗೆ ತೆರಳಿ ಚಿಕಿತ್ಸೆ ಪಡೆಯುವಂತಾ ಪರಿಸ್ಥೀತಿ ನಿರ್ಮಾಣವಾಗಿದೆ..

ವಾಯ್ಸ್ಓವರ್:-8 ತಿಂಗಳಿಂದ ಸರ್ಕಾರಿ ಆಸ್ಪತ್ರೆಗೆ ರೋಗಿಗಳು ಚಿಕಿತ್ಸೆಗೆ ಬಾರದ ಹಿನ್ನಲೆಯಲ್ಲಿ ಹಾಗೂ ಆಸ್ಪತ್ರೆಯ ನಿರ್ವಹಣೆ ಇಲ್ಲದ ಕಾರಣ ರಾತ್ರಿ ವೇಳೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪ್ರಾಥಮೀಕ ಆರೋಗ್ಯ ಕೇಂದ್ರ ತಾಣವಾಗಿದೆ..ಇನ್ನು ಕೇಂದ್ರ ಸರ್ಕಾರದ ಆಯುಷ್ಮಾನ್ ಯೋಜನೆಯಡಲ್ಲಿ ನೇಮಕಾತಿಯಾಗಿರುವ ವೈದ್ಯರೆ ಎಲ್ಲವನ್ನು ನಿರ್ವಹಣೆ ಮಾಡುತ್ತಿದ್ದು, ತುರ್ತುಪರಿಸ್ಥಿತಿ ಇರುವ ರೋಗಿಗಳಿಗೆ ಮಾತ್ರ ನಾವು ಬೆರೆಕಡೆ ಕಳುಹಿಸುತ್ತಿದ್ದೆನವೆ ಎನ್ನುತ್ತಾರೆ ಇಲ್ಲಿನ ವೈದ್ಯರು..


ವಾಯ್ಸ್ಓವರ್:-ಇನ್ನು ಈ ಬಗ್ಗೆ ಡಿಹೆಚ್ಓ ಅವರ ಗಮನಕ್ಕೂ ಹಾಗೂ ಸ್ಥಳೀಯ ಶಾಸಕರ ಗಮನಕ್ಕೂ ತಂದರು ಯಾವುದೆ ಪ್ರಯೋಜನವಾಗುತ್ತಿಲ್ಲಾ ಎನ್ನುವ ಆರೋಪಗಳು ಕೇಳೀ ಬರುತ್ತಿವೆ, ಅಷ್ಟೆ ಅಲ್ಲಾ ಸದ್ಯ ಡಾ.ಚಂದ್ರಶೇಖರ್ ಯಲಗುರ್ತಿ ಎಂಬುವರನ್ನ ನೇಮಕಾತಿ ಮಾಡಿದ್ರು ಸರಿಯಾಗಿ ಆಸ್ಪತ್ರೆಗೆ ಆಗಮಿಸುವುದಿಲ್ಲಾ ಎನ್ನುವ ಆರೋಪ ಮತ್ತೊಂದು ಕಡೆ, ಅದೇನೆ ಇರಲಿಹತ್ತು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಅತಿ ದೊಡ್ಡ ಹೂಬಳ್ಳಿ ಮಟ್ಟಡ ಈ ಸರ್ಕಾರಿ ಆಸ್ಪತ್ರೆಯಲ್ಲಿ ಒಂದು ಆಂಬ್ಯುಲೆನ್ಸ್ ವ್ಯವಸ್ಥ ಸಹ ಇಲ್ಲ.. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲವು ಇದ್ದು ಏನು ಇಲ್ಲದಂತೆ ರೋದು ಒಂದು ವಿಪರ್ಯಾಸವೆ ಸರಿ,

ವರದಿ:-ಮಹೇಶ ಸಜ್ಜನ ಬೀದರ