ಫೆ.2 ಕ್ಕೆ ಗಸ್ಟ್ ಟು ಡಸ್ಟ್ ಚಾಲೆಂಜ್

ನಗರದ ಸತ್ವಮ್ ಫಿಜಿಯೋಥೆರಪಿ ಮತ್ತು ಫಿಟ್ನೆಸ್ ಪುನರ್ವಸತಿ ಕೇಂದ್ರದ ವತಿಯಿಂದ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ನ್ನು ಫೆ.2 ರಂದು ಬೆಳಿಗ್ಗೆ 6 ರಂದು ನಗರದ ಕೆ.ಎಲ್.ಇ ಟೆಕ್ ನಲ್ಲಿ ಆಯೋಜಿಸಲಾಗಿದೆ ಎಂದು ವಿಜೇತಾ ಹಾಲಪೇಟ ಹೇಳಿದರು.

ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು 2018 ರಂದು ಆಯೋಜಿಸಲಾಗಿದ್ದ ಕಾರ್ಯಕ್ರಮ ಜನಪ್ರೀಯತೆ ಪಡೆದಿದ್ದು, ಈ ಹಿನ್ನಲೆಯಲ್ಲಿ ಗಸ್ಟ್ ಟು ಡಸ್ಟ್ ಚಾಲೆಂಜ್ 2.0 ನ್ನು ಹಮ್ಮಿಕೊಳ್ಳಲಾಗಿದೆ. ಅಂದು ಸ್ಪರ್ಧಾಳುಗಳು ನಿರ್ದಿಷ್ಟ ದೂರವನ್ನು ಓಡುವುದು ಜೊತೆಗೆ ದಾರಿಯಲ್ಲಿ ಕೆಲವು ಮೋಜಿನ ಆಸಕ್ತಿದಾಯಕ ಅಡೆತಡೆಗಳನ್ನು ದಾಟಬೇಕಾಗುತ್ತದೆ. ಆಟದಲ್ಲಿ ಹವ್ಯಾಸಿ, ಪ್ರೋ ಎಂದು ಎರಡು ವರ್ಗಗಳನ್ನಾಗಿ ಮಾಡಿದ್ದು, ಹವ್ಯಾಸಿಯಲ್ಲಿ 10 ಅಡಚಣೆಗಳೊಂದಿಗೆ ಐದು ಕಿ.ಮೀ ಓಟ, ಪ್ರೋ ದಲ್ಲಿ 12 ಅಡಚಣೆಗಳು 9.5 ಓಡಬೇಕು ಎಂದರು.
ಈಗಾಗಲೇ ಹಾವೇರಿ ಬೆಳಗಾವಿ, ಗದಗ, ಕೊಪ್ಪಳ, ಬಾಗಲಕೋಟೆ, ವಿಜಯಪುರ, ಕೊಲ್ಹಾಪುರ, ಬೆಂಗಳೂರು, ಮುಂಬೈ ಸೇರಿದಂತೆ ಮುಂತಾದ ನಗರದ ಅಭ್ಯರ್ಥಿಗಳು ಹೆಸರು ನೊಂದಾಯಿಸಿಕೊಂಡಿದ್ದು, ಸುಮಾರು 300 ರಿಂದ 500 ಜನ ಭಾಗವಹಿಸುವ ನೀರಿಕ್ಷೆ ಇದೆ. ಆಸಕ್ತರು ಮುಂಚಿತವಾಗಿ ನೋಂದಾಯಿಸಬೇಕು. ಹೆಚ್ಚಿನ ಮಾಹಿತಿ ಸತ್ವಮ್ ಫಿಜಿಯೋಥೆರಪಿ ಮತ್ತು ಫಿಟ್ ನೆಸ್ ಸೆಂಟರ್ ಗೋಕುಲ ರೋಡ್ ಹುಬ್ಬಳ್ಳಿ ಗೆ ಸಂಪರ್ಜಿಸಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಚನ್ನವೀರ, ವಿನೋದ ಪಟ್ವಾ, ಸುಶೀಲ್ ಲಡ್ಡಾ, ನಿತಿನ್ ಗುನಿಯಪ್ಪ, ಡಾ.ಜುಯಿ ಘೋರೆ, ಸಂದೀಪ ಇದ್ದರು.