ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಮಂಜೂರಾದ 21 ಜನ ಫಲಾನುಭವಿಗಳಿಗೆ ಉಚಿತ ಗ್ಯಾಸ್,

ಚಿಕ್ಕೋಡಿಯ ಮಾನ್ಯ ಸಂಸದರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ರವರ ವಿಶೇಷ ಪ್ರಯತ್ನದಿಂದ ಚಿಕ್ಕೋಡಿ ತಾಲೂಕಿನ ಜನವಾಡ ಗ್ರಾಮದಲ್ಲಿ ಪ್ರಧಾನ ಮಂತ್ರಿ ಉಜ್ವಲಾ ಯೋಜನೆ ಅಡಿಯಲ್ಲಿ ಮಂಜೂರಾದ 21 ಜನ ಫಲಾನುಭವಿಗಳಿಗೆ ಉಚಿತ ಗ್ಯಾಸ್, ಕು.ಸೃಷ್ಟಿ ಸುನೀಲ ಮೋಕಾಶಿ ಇವರಿಗೆ ಬಸವಜ್ಯೋತಿ ಯುಥ್ ಪೌಂಡೇಶನ್ ವತಿಯಿಂದ ರೂ.5,000/-ಶೈಕ್ಷಣಿಕ ಸಹಾಯಧನ ಹಾಗೂ ಶ್ರೀ ವಿಲಾಸ ಘಾಟಗೆ ಇವರ ಮಾಲಿಕತ್ವದ ಕುದುರೆಯು ಪ್ರವಾಹದಿಂದ ಮೃತಪಟ್ಟ ಹಿನ್ನಲೆಯಲ್ಲಿ ಸರ್ಕಾರದಿಂದ ಮಂಜೂರಾದ ರೂ.25,000/- ಸಹಾಯ ಧನವನ್ನು ಆಶಾಜ್ಯೋತಿ ವಿಶೇಷ ಮಕ್ಕಳ ಶಾಲೆಯ ಅಧ್ಯಕ್ಷರಾದ ಕು. ಜ್ಯೋತಿಪ್ರಸಾದ ಜೊಲ್ಲೆ ರವರು ವಿತರಿಸಿದರು.

ಈ ಸಂದರ್ಭದಲ್ಲಿ ಶ್ರೀ ಉದಯ ಪಾಟೀಲ, ಶ್ರೀ ಅಪ್ಪಾಸಾಹೇಬ ಪಾಟೀಲ, ಶ್ರೀ ರಮೇಶ ಪಾಟೀಲ, ಶ್ರೀ ಕಾಲಿಚರಣ ಪಾಂಡವ, ಶ್ರೀ ಸಂಜಯ ಕಾಂಬಳೆ, ಸೋನಾಲಿ ಮಗದುಮ, ಲಕ್ಕವ್ವಾ ಪೂಜಾರಿ, ಪಕ್ಷದ ಕಾರ್ಯಕರ್ತರು, ಫಲಾನುಭವಿಗಳು,ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.