ಪೌರತ್ವ ತಿದ್ದುಪಡಿ ಕಾಯ್ದೆ ಕೈ ಬಿಡುವಂತೆ ಅಲ್ಲಾನ್ ಮೊರೆ ಹೋದ ಮುಸ್ಲಿಂ ಸಮುದಾಯ.

-ಪೌರತ್ವ ತಿದ್ದುಪಡಿ ಕಾಯಿದೆ ರದ್ದುಗೊಳಿಸುವಂತೆ ಆಗ್ರಹಿಸಿ ಹುಬ್ಬಳ್ಳಿಯಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ನಮಾಜ್ ಮಾಡುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ನರಗದ ಹಳೇ ಹುಬ್ಬಳ್ಳಿಯಲ್ಲಿರುವ ಈದ್ಗಾ ಮೈದಾನದಲ್ಲಿ ಸಾವಿರಾರು ಮುಸ್ಲಿಂ ಸಮುದಾಯದವರು ”ಪೌರತ್ವ’ ತಿದ್ದುಪಡಿ ಹಾಗೂ ಎನ್‌ಆರ್.ಸಿ.ರದ್ದುಗೊಳಿಸುವಂತೆ ಅಲ್ಲಾನಲ್ಲಿ ಪ್ರಾರ್ಥನೆ ಸಲ್ಲಿಸಿದ್ರು.ನಂತರ ಮಾತನಾಡಿದ ಮಾಜಿ ಪಾಲಿಕೆ ಸದಸ್ಯ ಅಲ್ತಾಪ್ ಕಿತ್ತೂರ್’ ಭಾರತದಲ್ಲಿ ಹಿಂದೂ ಮುಸ್ಲಿಂ ಹಾಗೂ’ ಇನ್ನಿತರ ಸಮಾಜದವರು ಎಲ್ಲರೂ ಒಗ್ಗಟ್ಟಾಗಿ ಬಾಳುತ್ತಿದ್ದವೆ,ಆದ್ರೆ ಕೇಂದ್ರ ಸರಕಾರ ಪೌರತ್ವ ಕಾಯ್ದೆ ಜಾರಿ ಮಾಡುವ ಮೂಲಕ ದೇಶದ ಇಬ್ಬಾಗ ಮಾಡುವ ಹುನ್ನಾರ ಮಾಡುತ್ತಿದೆ.ಆದ್ದರಿಂದ ನಾವೂ ಎಲ್ಲಾ ಮುಸ್ಲಿಮ್ ಸಮುದಾಯದವರು ಸೇರಿಕೊಂಡು ಅಲ್ಲಾನಲ್ಲಿ ಪ್ರಾರ್ಥನೆ ಮಾಡಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸುತ್ತಿದ್ದೇವೆ ಕೂಡಲೇ ಕೇಂದ್ರ ಸರಕಾರ ಪೌರತ್ವ ಕಾಯ್ದೆ,ಮತ್ತು ಎನ್.ಆರ್.ಸಿ.ಜಾರಿಗೊಳಿಸುವುದನ್ನು’ ಕೈ ಬಿಡಬೇಕು ಎಂದು ಮನವಿ ಮಾಡಿದ್ರು.ಇದೇ ಸಂದರ್ಭದಲ್ಲಿ ಮಾಜಿ ಸಚಿವ ಎಮ್.ಎಮ್ ಹಿಂಡಸಗೇರಿ,ಅಲ್ತಾಪ್ ಅಳ್ಳೂರ್,ಅಸ್ಪಾಕ್,ಸಮುದಾಯದ ಮುಖಂಡರು ಭಾಗಿಯಾಗಿದ್ದರು..