ಪೌರತ್ವ ಕಾಯ್ದೆ ಬೆಂಬಲಿಸಿ ಬೃಹತ್ ಜನಾಂದೋಲನ ಮೆರವಣಿಗೆ..

ಕಲ್ಬುರ್ಗಿ : ಕಲ್ಬುರ್ಗಿಯಲ್ಲಿ ಡಾ. ಉಮೇಶ್ ಜಾಧವ್ ನೇತೃತ್ವದಲ್ಲಿ ಹಿರಿಯ ವೈದ್ಯರು ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಂದ ಪೌರತ್ವ ಕಾಯ್ದೆ ಬೆಂಬಲಿಸಿ ಬೃಹತ್ಪ್ರಮಾಣದ ಜನಾಂದೋಲನ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸರ್ದಾರ್ ವಲ್ಲಭಾಯಿ ಪಟೇಲ್ ವೃತ್ತದಿಂದ ವಿಧಾನಸೌಧದ ವರೆಗೆ ಮೆರವಣಿಗೆಯಲ್ಲಿ ಸಿಹಿ ಹಂಚುವ ಮೂಲಕ ಪೌರತ್ವ ಕಾಯ್ದೆ ಬಗ್ಗೆ ಜನಸಾಮಾನ್ಯರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು .

ದಿವ್ಯ ಹಾಗರಗಿಯವರು ಮಾತನಾಡಿ ಜನಾಂದೋಲನದಲ್ಲಿ ಭಾಗಿಯಾದ ಎಲ್ಲ ಹಿರಿಯ ವೈದ್ಯರಿಗೆ ಹಾಗೂ ಮೆಡಿಕಲ್ ವಿದ್ಯಾರ್ಥಿಗಳ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕ ಅವಿನಾಶ್ ಜಾಧವ್, ಹಿರಿಯಯ ವೈದ್ಯರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಉಪಸ್ಥಿತರಿದ್ದರು.

*ವರದಿಗಾರರು> ಆನಂದ ಜೈರಾಮ
*ಚೆನ್ನಮ್ಮ ಟೀವಿ ಕಲಬುರ್ಗಿ *