ಪಠ್ಯ ಮುಗಿಸದ ಮುಖ್ಯ ಶಿಕ್ಷಕರ ವಿರುದ್ಧ ಸಂವಿಧಾನ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ….

ಎಸೆಸ್ಸೆಲ್ಸಿ(S.S.L.C) ಪರೀಕ್ಷೆಗಳು ಹತ್ತಿರ ಬಂದರೂ ಪಠ್ಯ ಮುಗಿಸದೆ ಇರುವ ಶಾಲೆ ಮುಖ್ಯ ಶಿಕ್ಷಕರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಸಂವಿಧಾನ ಸಂರಕ್ಷಣಾ ಸಮಿತಿ ಕಲ್ಬುರ್ಗಿಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ತಾಲೂಕಿನ ತಾಜಾಸುಲ್ತಾನ ಪುರ ಗ್ರಾಮದಲ್ಲಿ ಮಾಪಣ್ಣ ಖರ್ಗಿ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ. ಸಂಸ್ಥೆಯವರು ನೇಮಿಸಿರುವ ಶಿಕ್ಷಕರೊಬ್ಬರು ಬಂದು ವಾರಕ್ಕೆರಡು ಪಾಠ ಮಾಡುವುದಾಗಿ ಕೇವಲ ಮೂರು ಪಾಠ ಮಾತ್ರ ಮಾಡಿದ್ದಾರೆ. ಸರ್ಕಾರಿ ಶಾಲೆ ಶಿಕ್ಷಕರು ಮತ್ತು ಶಿಕ್ಷಕಿಯರು ಮಕ್ಕಳಿಗೆ ಸಾವಿನ ದವಡೆಗೆ ನೂಕುತ್ತಿದ್ದಾರೆ. ಇದರ ನೇರ ಹೊಣೆಗಾರರಾಗಿದ್ದಾರೆ. ಹೀಗಾದರೆ ಸರ್ಕಾರಿ ಶಾಲೆಗೆ ಕಲಿಸುವುದಾದರೂ ಹೇಗೆ ಮತ್ತು ಸರ್ಕಾರಿ ಶಾಲೆಗಳು ಉಳಿಯುವುದಾದರೂ ಹೇಗೆ? ಈ ಕುರಿತು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನಕಾರರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು. ಮಕ್ಕಳ ಭವಿಷ್ಯ ನೇರವಾಗಿ ಹಾಳುಮಾಡಿದ ಶಿಕ್ಷಕರು ಮತ್ತು ಶಾಲೆಯ ಮುಖ್ಯ ಶಿಕ್ಷಕರನ್ನು ಅಮಾನತು ಮಾಡಬೇಕು. ಪಠ್ಯ ಮುಗಿಸದೆ ಇರುವ ಸಂಸ್ಥೆಯ ಕೈಯಲ್ಲಿರುವ ಮತ್ತು ಖಾಸಗಿ ಗಳನ್ನು ಶಾಲೆಗಳನ್ನು ಮುಚ್ಚಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಶ್ವಿನಿ ಮದನಕರ, ಭವಾನಿ ಪ್ರಸಾದ್, ಪೂಜಾ, ಹೇಮಾ ಸೇರಿದಂತೆ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

*ವರದಿಗಾರರು> ಆನಂದ ಜೈರಾಮ
*ಚೆನ್ನಮ್ಮ ಟೀವಿ ಕಲಬುರ್ಗಿ *