ನೆರೆ ಸಂತ್ರಸ್ತರಿಗಾಗಿ ಕೂಡಿ ಹಾಕಿದ ದವಸ ಧಾನ್ಯಗಳು ಅಧಿಕಾರಿಗಳ ಪಾಲು

ಹೌದು ಮೊನ್ನೆ ತಾನೇ ಆಗಷ್ಟ್ ತಿಂಗಳಲ್ಲಿ ಸಂಭವಿಸಿದ ಮಹಾ ಪ್ರವಾಹದಲ್ಲಿ ಸಿಲುಕಿ ನೊಂದು-ಬೆಂದಿರುವ ಜನರಿಗೆ ವಿವಿಧ ಭಾಗಗಳಿಂದ ದಾನಿಗಳು ಅಗತ್ಯ ವಸ್ತುಗಳನ್ನು ನೀಡಿದ್ದರು.

ಆದರೆ ದವಸ ಧಾನ್ಯಗಳನ್ನು ಸಂತ್ರಸ್ತರಿಗೆ ನಿಡದೆ ಸುರಪುರದ ಎ.ಪಿ.ಎಮ್.ಸಿ ಯಲ್ಲಿ ಕೂಡಿಡಲಾಗಿತ್ತು

ಅದೇ ಕೂಡಿಟ್ಟ ದವಸ ಧಾನ್ಯಗಳು ಶೆಳ್ಳಗಿ ಹಾಗೂ ಮುಷ್ಠಳ್ಳಿ ಗ್ರಾಮಕ್ಕೆ ವಿತರಿಸುತ್ತೆವೆ ಅಂತ ಹೇಳಿ ದೇವಪುರದ ಗ್ರಾಮ ಪಂಚಾಯತ್ ಕಾರ್ಯಲಯದಲ್ಲಿ ಕೂಡಿಟ್ಟದ್ದಾರೆ.

ಅದನ್ನು ಅರಿತ ಸುರಪುರ ಜಯ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿದ್ದಾಗ ಅಧಿಕಾರಿಗಳು ಸುಳ್ಳು ಮಾಹಿತಿ ನೀಡಿದ್ದಾರೆ.

ತಹಸೀಲ್ದಾರ್ ಸಾಹೇಬರಿಗೆ ಪೋನ್ ಮುಖಾಂತರ ತಿಳಿಸಿದಾಗ ಶೆಳ್ಳಿಗೆ ಹಾಗೂ ಮುಷ್ಠಳ್ಳಿ ಗ್ರಾಮಕ್ಕೆ ವಿತರಿಸಲು ಹೇಳಿದ್ದೇನೆ ಆದರೆ ಗ್ರಾಮ ಪಂಚಾಯಿತಿಯಲ್ಲಿ ಸ್ಟಾಕ್ ಮಾಡಲು ಹೇಳಿಲ್ಲಾ ಅಂತ ಹಾರಿಕೆಯ ಉತ್ತರ ನೀಡುತ್ತಿದ್ದಾರೆ….

ಒಂದು ಮಾತಂತು ಸತ್ಯ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಅಂಶ ಬಹುಶಃ ಇಲ್ಲಿ ನೆನಪಿಗೆ ಬಂದರೂ ಅತಿಶಯೋಕ್ತಿಯೇನಲ್ಲ..

ವರದಿ
ಸುರಪೂರ ತಾಲೂಕು ರಮೇಶ ಚನ್ನಮ್ಮ ಟಿವಿ