ನಡುಗಡ್ಡೆಯಂತಾದ ಗ್ರಾಮಗಳು. ಗೊಕಾಕ – ಅಥಣಿ ಸೆತುವೆ ಜಲಾವೃತ

ಅಥಣಿ : ಕಳೆದ ಎರಡು ವಾರಗಳಿಂದ ಕೃಷ್ಣಾ ನದಿಯ ರೌಧ್ರನರ್ತನಕ್ಕೆ ತಾಲೂಕಿನ ನದಿ ಅಂಚಿನ ಗ್ರಾಮಗಳಾದ ಖವಟಕೋಪ್ಪ, ದರೂರ, ಶೇಗುಣಸಿ, ಇಂಗಳಗಾಂವ, ನಾಗನೂರು, ಸವದಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಸಂಪೂರ್ಣ ನೀರಿನಿಂದ ಆವರಿಸಿ, ನಡುಗಡ್ಡೆಯಂತಾಗಿವೆ. ಇನ್ನೊಂದೆಡೆ ದರೂರ ಸೇತುವೆ ಸೇರಿದಂತೆ ಎಲ್ಲಾ ಸೇತುವೆಗಳು ಮುಳುಗಿಹೋಗಿವೆ.

ಮನೆಗಳಿಗೆ ನೀರು ನುಗ್ಗುತ್ತಿದ್ದು ಮೂಕ ವಿಸ್ಮಿತರಾದ ಗ್ರಾಮಸ್ಥರು ಗಂಜಿ ಕೇಂದ್ರಗಳತ್ತ ಮುಖ ಮಾಡುತ್ತಿದ್ದಾರೆ. ಕುಟುಂಬಸ್ಥರು ಜಾನುವಾರುಗಳನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಹರಸಾಹಸ ಪಡುವಂತಾಗಿದೆ.

ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ನಾವುಗಳು, ಇಂದಿನ ಮಾಹಾಮಳೆಗೆ ಗ್ರಾಮ ತೊರೆಯುವಂತಾಗಿದೆ ಎಂದು ಜನತೆ ಪರಸ್ಪರ ಮಾತನಾಡಿಕೊಳ್ಳುತ್ತಿರುವುದು ಕಂಡು ಬಂದಿತು.