ಜೆಎಸ್‍ಡಬ್ಲ್ಯೂ ಪೇಂಟ್ಸ್‍ನಿಂದ ಗುತ್ತಿಗೆದಾರರಿಗೆ ನೆರವು

 

ಹುಬ್ಬಳ್ಳಿ,ಮೇ,- ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ ಸ್ಟಾರ್ ಕಾಂಟ್ರಾಕ್ಟರ್ ಪಾಲುದಾರ’ ಕಾರ್ಯಕ್ರಮವು ಈ ಲಾಕ್ ಡೌನ್‍ನ ಸಂಕಷ್ಟದ ಸಮಯದಲ್ಲಿ ಗುತ್ತಿಗೆದಾರ ಪಾಲುದಾರರ ಬ್ಯಾಂಕ್ ಖಾತೆಗಳಿಗೆ ಸುಲಭ ಮತ್ತು ನೇರ ಪ್ರಯೋಜನಗಳನ್ನು ವರ್ಗಾಯಿಸಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ್ದು,
ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳಲ್ಲಿ 4,000 ಕ್ಕೂ ಹೆಚ್ಚು ಗುತ್ತಿಗೆದಾರರು ಈ ಕಾರ್ಯಕ್ರಮದ ಲಾಭ ಪಡೆಯುವ ನಿರೀಕ್ಷೆ ಇದ್ದು ಕೇವಲ ನೀರಿನ ಆಧಾರಿತ ಉತ್ಪನ್ನಗಳ ಪೋರ್ಟ್‍ಫೋ ಲಿಯೊ ಮತ್ತು 14 ಬಿಲಿಯನ್ ಯುಎಸ್ ಡಾಲರ್ ಜೆಎಸ್‍ಡಬ್ಲ್ಯೂ ಸಮೂಹದ ಭಾಗವಾಗಿರುವ ಭಾರತದ ಹೊಸ ಯುಗದ ಪೇಂಟ್ ಕಂಪನಿಯಾದ ಜೆಎಸ್‍ಡಬ್ಲ್ಯೂ ಪೇಂಟ್ಸ್, ಪೇಂಟಿಂಗ್ ಗುತ್ತಿಗೆದಾರರಿಗಾಗಿ “ಸ್ಟಾರ್ ಕಾಂಟ್ರಾಕ್ಟರ್ ಪಾಲುದಾರ” ಕಾರ್ಯಕ್ರಮವನ್ನು ನಡೆಸಲಿದೆ.
ಕೋವಿಡ್-19 ಸಾಂಕ್ರಾಮಿಕ ಮತ್ತು ಅದರ ಪರಿಣಾಮವಾಗಿ ಆದ ಲಾಕ್‍ಡೌನ್ ಮನೆಯ ಪೇಂಟಿಂಗ್ ಮಾಡುವ ಗುತ್ತಿಗೆದಾರರ ವ್ಯವಹಾರದ ಮೇಲೆ ವ್ಯಾಪಾರದ ಸಂದರ್ಭದಲ್ಲಿ ತೀವ್ರವಾಗಿ ಪರಿಣಾಮ ಬೀರಿದೆ. ಅದರ ಚಿಂತನಶೀಲ ಕ್ರಮಗಳ ಅಂಗವಾಗಿ, ಮತ್ತು ಈ ಅನಿರೀಕ್ಷಿತ ಕಾಲದಲ್ಲಿ ಗುತ್ತಿಗೆದಾರರಿಗೆ ಸಹಾಯ ಹಸ್ತ ನೀಡಲು, ಜೆಎಸ್‍ಡಬ್ಲ್ಯೂ ಪೇಂಟ್ಸ್ ತನ್ನ ಎಲ್ಲ ಗುತ್ತಿಗೆದಾರರಿಗೆ ಅವರ ಸಂಗ್ರಹಿಸಿದ ಇನ್ಸೆಂಟಿವ್‍ಗಳು ಮತ್ತು ಲಾಯಲ್ಟಿ ಪಾಯಿಂಟ್‍ಗಳನ್ನು ನಗದು ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.
ಗುತ್ತಿಗೆದಾರರಿಗೆ ಅವರ ಬ್ಯಾಂಕ್ ಖಾತೆಗಳಲ್ಲಿ ಹಣ ಒದಗಿಸುವುದು ಇದರ ಉದ್ದೇಶ. ಈ ಉಪಕ್ರಮದಿಂದ ಮಾರುಕಟ್ಟೆಯಾದ್ಯಂತ 4000ಕ್ಕೂ ಹೆಚ್ಚು ಪೇಂಟಿಂಗ್ ಗುತ್ತಿಗೆದಾರರು ಲಾಭ ಪಡೆಯಲಿದ್ದಾರೆ.
ಜೆಎಸ್‍ಡಬ್ಲ್ಯೂ ಪೇಂಟ್ಸ್ ಅನ್ನು ಒಂದು ವರ್ಷದ ಹಿಂದೆಯಷ್ಟೇ 2019ರ ಮೇನಲ್ಲಿ ಪ್ರಾರಂಭಿಸಲಾಗಿದ್ದು, ಈ ಅಲ್ಪಾವಧಿಯಲ್ಲಿ, ಕಂಪನಿಯು ತನ್ನ ವ್ಯಾಪಾರ ಮತ್ತು ಕಾರ್ಯಾಚರಣೆಯನ್ನು ಹೊಂದಿರುವ ದಕ್ಷಿಣ ಮತ್ತು ಪಶ್ಚಿಮದ ಮಾರುಕಟ್ಟೆಗಳಲ್ಲಿ ಚಿಲ್ಲರೆ ವ್ಯಾಪಾರಿಗಳು ಮತ್ತು ಗುತ್ತಿಗೆದಾರರನ್ನು ಆನ್‍ಬೋರ್ಡ್ ಮಾಡಿಕೊಂಡಿದೆ. ಜೆಎಸ್‍ಡಬ್ಲ್ಯೂ ಪೇಂಟ್ಸ್‍ನ “ಸ್ಟಾರ್ ಕಾಂಟ್ರಾಕ್ಟರ್ ಪಾಲುದಾರ” ಕಾರ್ಯಕ್ರಮವು ಪೇಂಟಿಂಗ್ ಗುತ್ತಿಗೆದಾರರಿಗೆ ತಮ್ಮ ಲಾಯಲ್ಟಿ ಮೊಬೈಲ್ ಅಪ್ಲಿಕೇಶನ್ ಮೂಲಕ ಸ್ಟಾರ್ ಪಾಯಿಂಟ್‍ಗಳನ್ನು ಮತ್ತು ಅವರು ಅಪ್ಲಿಕೇಶನ್ ಬಳಸುವಾಗ ಅವರು ಗಳಿಸುವ ಎಲ್ಲಾ ಎಂಗೇಜ್‍ಮೆಂಟ್ ಆಧಾರಿತ ಇನ್ಸೆಂಟಿವ್‍ಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತದೆ ಎಂದಿದ್ದಾರೆ.