ಗೋಕಾಕ‌ ತಾಲೂಕಿನ ಕೊಣ್ಣೂರ ಪಟ್ಟದಲ್ಲಿ ಸಾರ್ವಜನಿಕರ ಬಹುದಿನಗಳ ಕನಸಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ಗೋಕಾಕ‌ ತಾಲೂಕಿನ ಕೊಣ್ಣೂರ ಪಟ್ಟದಲ್ಲಿ ಸಾರ್ವಜನಿಕರ ಬಹುದಿನಗಳ ಕನಸಾಗಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಜಲ ಸಂಪನ್ಮೂಲ ಸಚಿವರಾದ ರಮೇಶ ಜಾರಕಿಹೋಳಿಯವರು ರಿಬ್ಬನ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು.

ರಾಜಕೀಯ ಗೊಂದಲದಿಂದ ಕೆಲವು ದಿನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟನೆ ಆಗದೆ ಹಿಂದೆ ಬಿದ್ದಿತ್ತು.ಆದರೆ ಸಾರ್ವಜನಿಕರಿಗೆ ಉಪಯೊಗವಾಗಲು ಸರಳ ರೀತಿಯಲ್ಲಿ ಉದ್ಘಾಟನೆ ಮಾಡಿಸಿದ್ದೇನೆ ಮತ್ತು ಶಿಘ್ರದಲ್ಲಿಯೆ ತಾವು 2 ರಿಂದ 3 ಎಕರೆ ಜಮೀನನ್ನು ನೋಡಿ ತಿಳಿಸಿದರೆ 6 ಹಾಸಿಗೆಯುಳ್ಳ ಆಸ್ಪತ್ರೆಯನ್ನು 30 ಹಾಸಿಗೆಗೆ ಉನ್ನತ ಮಟ್ಟದ ಆಸ್ಪತ್ರೆಯನ್ನು ಮಾಡುವುದಾಗಿ ತಿಳಿಸಿದರು.

ಇವತ್ತು ಸರಕಾರಿ ಆಸ್ಪತ್ರೆ ಅಂದರೆ ಸಾರ್ವಜನಿಕರಿಗೆ ಅಸಡ್ಡೆಯಾಗಿದೆ ಕಾರಣ ಅವರಲ್ಲಿ ಶ್ರೀಮಂತರಿಗೆ ಮಾತ್ರ ಒಳ್ಳೆಯ ಚಿಕಿತ್ಸೆ ನೀಡುತ್ತಾರೆಂಬ ಭಾವನೆಯಿದೆ, ನನ್ನ ಮಗನು ಸರಕಾರಿ ಆಸ್ಪತ್ರೆಯಲ್ಲಿ ಹುಟ್ಟಿದ್ದನು, ಈಗ ಅವನಿಗೂ ಕೂಡ ಸರಕಾರಿ ಆಸ್ಪತ್ರೆಯಲ್ಲಿಯೆ ಮಗ ಹುಟ್ಟಿದ್ದಾನೆ, ಹೀಗಿರುವಾಗ ಬಡವರಲ್ಲಿದ್ದ ಭಾವನೆಯನ್ನು ದೂರಮಾಡಬೇಕಾದರೆ ತಾವೆಲ್ಲರೂ ಶ್ರೀಮಂತರು,ಬಡವರೆಂಬ ಬೇದ ಭಾವ ಮಾಡದೆ ಎಲ್ಲರಿಗೂ ಒಳ್ಳೆಯ ಚಿಕಿತ್ಸೆ ನೀಡಿದಾಗ ಮಾತ್ರ ಸಾದ್ಯ,

ನಾನು ಮೊದಲು ಶಾಸಕನಾಗಿ ಆಯ್ಕೆಯಾಗಿದ್ದಾಗ ಗೋಕಾಕಿನ ಸರಕಾರಿ ಆಸ್ಪತ್ರೆಯ ಅವ್ಯವಸ್ಥೆ ನೋಡಿ ಆ ಸರಕಾರಿ ಆಸ್ಪತ್ರೆಯನ್ನು ರಾಜ್ಯದಲ್ಲಿ ಮೊದಲನೆಯ ಸ್ಥಾನಕ್ಕೆ ಕೊಂಡೊಯ್ಯುವ ಗುರಿ ಇವತ್ತು ತಮ್ಮೆಲ್ಲರ ಸಹಕಾರ ಹಾಗೂ ಒಗ್ಗಟಿನಿಂದ ಮಾಡುತ್ತಿರುವ ಕೆಲಸದಿಂದಾಗಿ ನನಸಾಗಿದೆ.

ಅದಲ್ಲದೆ ಇದೆ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೋಳಿಯವರಿಗೆ ಸ್ಥಳಿಯರು ತಮ್ಮ ಬಹುದಿನಗಳ ಬೇಡಿಕೆ ಯಾಗಿರುವ ಗೋಕಾಕ ರೇಲ್ವೆ ಸ್ಟೇಷನದಲ್ಲಿ ಜನರಿಗೆ ಅನೂಕೂಲವಾಗಲು ಎರಡು ಎಕ್ಷಪ್ರೇಸ್ ರೈಲು‌ ನಿಲ್ಲಸಲು ಮನವಿ ಮಾಡಿಕೊಂಡಾಗ ಶೀಘ್ರದಲ್ಲಿಯೆ ಆ ಕೆಲಸವನ್ನು ಮಾಡಿಕೊಡುವುದಾಗಿ ತಿಳಿಸಿದಾಗ ಜನ ತಮ್ಮ ಹರ್ಷ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಜಂಟಿ ನೀರ್ದೇಶಕರಾದ ನರಟ್ಟಿ, ಜಿಲ್ಲಾ ಆರೋಗ್ಯ ಅಧಿಕಾರಿ ಮುನ್ಯಾಳ,ಸ್ಥಳಿಯ ಮುಖಂಡರಾದ ಪ್ರಕಾಶ ಕರನಿಂಗ, ಶಿವಾನಂದ ಗಣಾಚಾರಿ, ಜಿನ್ನಪ್ಪ ಹೋಳಿ, ಮಹಾವೀರ ಬೂದಿಗೊಪ್ಪ ಹಾಗೂ ಅನೆಕರು ಉಪಸ್ಥಿತರಿದ್ದರು.

ಚೆನ್ನಮ್ಮಾ ಟಿವಿ,
ಗೋಕಾಕ