ಗೋಕಾಕ್ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಎಸ್.ಸಿ.ಸಿ ತ೦ಡ ಹಾಗೂ ಲಖನ ಜಾರಕಿಹೊಳಿ ಅಭಿಮಾನಿ ಬಳಗದ ನೇತೃತ್ವದಲ್ಲಿ ಪುರುಷರ ಕಬಡ್ಡಿ ಪಂದ್ಯಾವಳಿ

ಗೋಕಾಕ್ ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಎಸ್.ಸಿ.ಸಿ ತ೦ಡ ಹಾಗೂ ಲಖನ ಜಾರಕಿಹೊಳಿ ಅಭಿಮಾನಿ ಬಳಗ

ಸೇರಿ ದೀಪಾವಳಿ ನಿಮಿತ್ತ ಮ್ಯಾಟ್ ಮೇಲೆ ಪುರುಷರ ಮುಕ್ತ ಕಬಡ್ಡಿ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದ್ದು ದಿನಾಂಕ ೩೧/೧೦/೨೦೧೯ ರಂದು ಪ್ರಾರಂಭವಾಗಿದ್ದು ದಿನಾಂಕ ೨/೧೧/೨೦೧೯ ರವರೆಗೆ ನಡೆಯುತ್ತಿದ್ದು ಈ ಪಂದ್ಯಾವಳಿಗಳು ಭಾರತ ದೇಶದಲ್ಲಿ ನಡೆಸುವ ಹೆಸರಾಂತ ಪ್ರೊ ಕಬಡ್ಡಿ ಮಾದರಿಯಲ್ಲಿ ಎಸ್ಎಸ್ ಸಿ ತಂಡ ಹಾಗೂ ಲಖನ ಜಾರಕಿಹೊಳಿ ಅಭಿಮಾನಿಗಳು ಸೇರಿ ಮತ್ತು ಸಾವಳಗಿ ಖಾನಾಪುರ ಮುತ್ನಾಳ ನಂದಗಾಂವ್ ಗ್ರಾಮಸ್ಥರು ಸೇರಿ ಈ ಗ್ರಾಮೀಣ ಕ್ರೀಡೆಯನ್ನು ನಡೆಸುತ್ತಿದ್ದಾರೆ ಹಾಗೂ ಹೆಸರಾಂತ ಕ್ರೀಡಾ ಅಭಿಮಾನಿಗಳು ಜನಪ್ರಿಯ ನಾಯಕರು ಕಾಂಗ್ರೆಸ್ ಪಕ್ಷದ ಮುಖಂಡರಾದ ಲಖನ ಜಾರಕಿಹೊಳಿ ಅವರು ದಿನಾಂಕ ೩೧/೧೦/೨೦೧೯ ರಂದು ಸಾವಳಿಗಿ ಗ್ರಾಮಕ್ಕೆ ಬಂದು ಗ್ರಾಮೀಣ ಕ್ರೀಡೆಯಾದ ಕಬಡ್ಡಿಗೆ ಚಾಲನೆ ನೀಡಿ ಪಂದ್ಯ ವೀಕ್ಷಿಸಿದರು.

ಪ್ರಮುಖರಾದ ಪ್ರಕಾಶ ಡಾಂಗೆ (ಕಾಂಗ್ರೇಸ ಗ್ರಾಮೀಣ ಘಟಕದ ಅಧ್ಯಕ್ಷರು), ಕೀಶೊರ ಭಟ್, ಮಲ್ಲಪ್ಪ ಗೋಕಾಕ್ ಮಹೇಂದ್ರ ಶಿರಹಟ್ಟಿ ,ಶಿವಲಿಂಗ ಕೋಟಬಾಗಿ, ಮಹಮ್ಮದ್ ಬಾಗಿ, ಬಸವರಾಜ ಮುನ್ನೋಳಿ, ಶಿವಲಿಂಗ ಕಬಾಡಗಿ,ರಘು ಮಗದುಮ್ಮ, ಮುನಿರ ಪಟೇಲ ಮತ್ತು ಶಿವಲಿಂಗೇಶ್ವರ ಕೋಟಬಾಗಿ, ಶಾನುಲ ಹತ್ತಿವಾಲೆ ಭಾಗವಹಿಸಿ ಕ್ರೀಡೆಗೆ ಪ್ರೋತ್ಸಾಹಿಸಿದರು.