ಗಣರಾಜ್ಯೋತ್ಸವ ಆಚರಣೆಗೆ ಸಿದ್ದಗೊಂಡಿದೆ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತ

ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಹು-ಧಾ ಮಹಾನಗರದಲ್ಲಿ ಎಲ್ಲೆಂದರಲ್ಲಿ ತಳಿರು ತೋರಣಗಳ ಕಲರವ. ರಾತ್ರಿ ಸಮಯದಲ್ಲಿ ಮಿಂಚುತ್ತಿವೆ ಎಲ್.ಇ.ಡಿ ದೀಪಗಳ ಮಾಲೆ.ಗಣರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಹುಬ್ಬಳ್ಳಿ ರಾಣಿ ಚೆನ್ನಮ್ಮ ವೃತ್ತದಲ್ಲಿ ಹಬ್ಬದ ಕಳೆ ಚಿಗುರೊಡೆದಿದೆ.

ಹೌದು ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಜನವರಿ26ರಂದು ಗಣರಾಜ್ಯೋತ್ಸವ ಹಾಗೂ ಸಂಗೊಳ್ಳಿ ರಾಯಣ್ಣನವರ ಜಯಂತೋತ್ಸವದ ಪ್ರಯುಕ್ತವಾಗಿ ಎಲ್.ಇ.ಡಿ ದೀಪಗಳಿಂದ ರಾಣಿ ಚೆನ್ನಮ್ಮ ವೃತ್ತವನ್ನು ಅಲಂಕರಿಸಲಾಗಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಸಣ್ಣ ಹಬ್ಬಗಳನ್ನು ಕೂಡ ಅದ್ದೂರಿಯಾಗಿ ಮಾಡುತ್ತಾರೆ.ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಲಾಗುತ್ತಿದ್ದು,ರಾಣಿ ಚೆನ್ನಮ್ಮ ವೃತ್ತದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.