ಗಡಿನಾಡು ಬೀದರ್ ಜಿಲ್ಲಾ ಪಕ್ಷದ ಕಾರ್ಯಾಲಯದಲ್ಲಿ ಕಲಬುರ್ಗಿ ವಿಭಾಗದ ಪ್ರಭಾರಿಗಳಾದ ಹಾಗೂ ಸೇಡಂ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಕುಮಾರ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.

ಗಡಿನಾಡು ಬೀದರ್ ಜಿಲ್ಲೆಗೆ ಪ್ರವಾಸ ಕೈಗೊಂಡ ಕಲಬುರ್ಗಿ ವಿಭಾಗದ
ಪ್ರಭಾರಿಗಳಾದ ಸೇಡಂ ಮತ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ರಾಜಕುಮಾರ್ ಪಾಟೀಲ್ ತೇಲ್ಕುರ್ ಅವರನ್ನು ಬೀದರ್ ಜಿಲ್ಲಾ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಮುಖಂಡರು, ಪ್ರಮುಖರ ಸಭೆ ತೆಗೆದುಕೊಂಡು ಸದಸ್ಯತ್ವ ಅಭಿಯಾನದ ಸಂಪೂರ್ಣ ವರದಿ ಪಡೆದುಕೊಂಡರು. ಪಕ್ಷ ಸಂಘಟನಾತ್ಮಕ ದೃಷ್ಟಿಯಿಂದ ಹೇಗೆ ಕಾರ್ಯನಿರ್ವಹಿಸಬೇಕೆಂದು ಸಭೆಯನ್ನುದ್ದೇಶಿಸಿ ಮಾತನಾಡಿದರು. ತದನಂತರ ಬೀದರ್ ಜಿಲ್ಲಾ ಮಂಡಲ ಮತ್ತು ನಗರ ಘಟಕದ ವತಿಯಿಂದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶ್ರೀಮತಿ ಶಶಿಕಲಾ ಜೊಲ್ಲೆಯವರು ಸೇಡಂ ಶಾಸಕರಾದ ರಾಜಕುಮಾರ್ ಪಾಟೀಲರನ್ನು ಗೌರವಿಸಿ ಸನ್ಮಾನಿಸಿದರು. ಬೀದರ್ ಸಂಸದರಾದ ಶ್ರೀ ಭಗವಂತ ಖುಬಾ ಅವರು ಕಲಬುರ್ಗಿ ವಿಭಾಗದ ಪ್ರಭಾರಿಗಳ ಆದ ಮೇಲೆ ಮೊದಲ ಬಾರಿಗೆ ತಮ್ಮ ನಗರಕ್ಕೆ ಆಗಮಿಸಿದ ಸೇಡಂ ಮತಕ್ಷೇತ್ರದ ಜನಪ್ರಿಯ ಶಾಸಕರಾದ ರಾಜಕುಮಾರ್ ಪಾಟೀಲ್  ತೇಲ್ಕುರ್ ಅವರನ್ನು ತಮ್ಮ ನಿವಾಸದಲ್ಲಿ ಸನ್ಮಾನಿಸಿ ಶುಭ ಕೋರಿದರು.

ವರದಿಗಾರರು> ಭಗವಂತ, ಬಸವರಾಜ
ಚೆನ್ನಮ್ಮ ಟಿವಿ ಸೇಡಂ