ಕಲ್ಯಾಣ ಕರ್ನಾಟಕ ಭಾಗದ ಔದ್ಯೋಗಿಕರಣಕೆ ನಮ್ಮ ಸರ್ಕಾರ ಬದ್ಧ ಎಂದ ಗೃಹ ಸಚಿವ ಬಸವರಾಜ ಬೊಮ್ಮಾಯಿ….

ಕಲ್ಯಾಣ ಕರ್ನಾಟಕ ಭಾಗದ ಔದ್ಯೋಗಿಕರಣಕ್ಕೆ ಮತ್ತು ಯುವಕರಿಗೆ ಉದ್ಯೋಗ ಒದಗಿಸಿಕೊಡುವ ನಿಟ್ಟಿನಲ್ಲಿ ನಮ್ಮ ಸರ್ಕಾರ ತ್ವರಿತವಾಗಿ ಕೆಲಸ ಮಾಡುವುದಾಗಿ ಕಲ್ಬುರ್ಗಿಯಲ್ಲಿ ಭರವಸೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ. ಅಪ್ಪು ಗೌಡರ ಜನ್ಮದಿನದ ಅಂಗವಾಗಿ ಉದ್ಯೋಗಮೇಳ ಹಮ್ಮಿಕೊಂಡಿದ್ದ ಸಂದರ್ಭದಲ್ಲಿ ಕಲ್ಬುರ್ಗಿ ನಗರಕ್ಕೆ ಭೇಟಿ ನೀಡಿದಾಗ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ಅವರು ಅಪ್ಪು ಗೌಡರಿಗೆ ಜನ್ಮದಿನದ ಶುಭಾಶಯ ಕೋರಿ ನಂತರ ಮಾತನಾಡಿ ಕಲ್ಯಾಣ ಕರ್ನಾಟಕ ಭಾಗದ ಪೊಲೀಸ್ ಇಲಾಖೆಯಲ್ಲಿ ಸುಧಾರಣೆ, ವಿಮಾನ ನಿಲ್ದಾಣ ಕಾರ್ಯಗಳು ತೀವ್ರಗತಿಯಲ್ಲಿ ಮಾಡುವುದರ ಮುಖಾಂತರ ಯುವಕರಿಗೆ ಉದ್ಯೋಗ ಸಿಗುವಂತೆ ಮಾಡುವುದು ಮತ್ತು ಆರ್ಥಿಕ ಸುಧಾರಣೆ ನಮ್ಮ ಸರ್ಕಾರದ ಪ್ರಮುಖ ಗುರಿಯಾಗಿದೆ ಎಂದು ಹೇಳಿದರು. ಗೃಹ ಸಚಿವ ಆರ್ ಅಶೋಕ್ ಸಂದರ್ಭದಲ್ಲಿ ಉಪಸ್ಥಿತರಿದ್ದರು.


*ವರದಿಗಾರರು> ಆನಂದ ಜೈರಾಮ
*ಚೆನ್ನಮ್ಮ ಟೀವಿ ಕಲಬುರ್ಗಿ *