ಕಲಘಟಗಿ ಬಳಿ ರಸ್ತೆ ಅಪಘಾತ ಲಾರಿಗಳೆರೆಡು ಭಸ್ಮ.

ಲಾರಿ ಹಾಗೂ ಟಿಪ್ಪರ ನಡುವೆ ಡಿಕ್ಕಿ ಸಂಭವಿಸಿ ಎರಡು ಲಾರಿಗಳು ಹೊತ್ತಿ ಉರಿದ ಘಟನೆ ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ರಾತ್ರಿ 9-30ರ ಸುಮಾರಿಗೆ ನಡೆದಿದೆ.

ಟಿಪ್ಪರಲ್ಲಿನ ಚಾಲಕನೂ ವಾಹನದಲ್ಲೇ ಸಜೀವ ದಹನವಾಗಿರಬಹುದು ಎಂದು ಶಂಕಿಸಲಾಗಿದೆ. ಲಾರಿಯಲ್ಲಿನ ಚಾಲಕ ಮತ್ತು‌ ಕ್ಲಿನರ್ ಅಪಘಾತ ಸಂಭವಿಸುತ್ತಿದ್ದಂತೆ ಇಳಿದು ಓಡಿ ಹೋಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ. ಬೆಂಕಿ ನಂದಿಸಲು ಸುಮಾರು ಒಂದುವರೆ ಗಂಟೆ ತಗುಲಿತು. ಪೊಲೀಸರು ಸ್ಥಳದಲ್ಲೇ ಬಿಡು ಬಿಟ್ಟಿದ್ದಾರೆ. ಲಾರಿ ಹಾಗೂ‌ ಟಿಪ್ಪರನಲ್ಲಿ ಏನು ಸಾಗಿಸಲಾಗುತ್ತಿತ್ತು ಎಂಬುದು ಗೊತ್ತಾಗಿಲ್ಲ. ಎಲ್ಲಿಯ ವಾಹನಗಳಿವು? ಎಲ್ಲಿಗೆ ಹೋಗುತ್ತಿದ್ದವು ಎಂಬುದು ತಿಳಿದಿಲ್ಲ.

ಪೊಲೀಸರ ತನಿಖೆ ಬಳಿಕವೇ ವಿವರ ಗೊತ್ತಾಗಲಿದೆ. ಈ ಕುರಿತು ಕಲಘಟಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.