ಇಂದು 22 ಪಾಸಿಟಿವ್ ಪ್ರಕರಣ

ಬೆಂಗಳೂರು ಮೇ., 14- ರಾಜ್ಯದಲ್ಲಿ ಇಂದು 22 ಜನರಲ್ಲಿ ಹೊಸ ಕೊರೊನಾ ಸೋಂಕು ಪತ್ತೆಯಾಗಿದ್ದು. ಒಟ್ಟು ಸೋಂಕಿತರ ಸಂಖ್ಯೆ 981 ಕ್ಕೆ ಏರಿಕೆಯಾಗಿದೆ. ಇಂದು ಮತ್ತೆ ಇಬ್ಬರು ಈ ಸೋಂಕಿನಿಂದ ಮೃತರಾಗಿದ್ದಾರೆ.
ನಿನ್ನೆ ರಾಜ್ಯದಲ್ಲಿ ಕೊರೊನಾ ಸೋಂಕಿ ಇಬ್ಬರು ಬಲಿಯಾಗಿದ್ದರು. ಇಂದು ಮತ್ತೆ ಇಬ್ಬರು ಬಲಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 80 ವರ್ಷದ ಮಹಿಳೆ ಮತ್ತು ಆಂದ್ರಪ್ರದೇಶದ ನಿವಾಸಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 60 ವರ್ಷದ ಪುರುಷ ಕೊರೊನಾ ಸೋಂಕಿನಿಂದ ಇಂದು ನಿಧನನಾಗಿದ್ದಾನೆ. ರಾಜ್ಯ ಕೊರೊನಾಗೆ ಇದು 35 ಬಲಿಯಗಿದೆ.
ದಾವಣಗೆಯ 3, ಮಂಡ್ಯದ 4, ಬೆಂಗಳೂರು ನಗರದಲ್ಲಿ 5, ಗದಗನಲ್ಲಿ 4, ಬೆಳಗಾವಿಯಲ್ಲಿ 1, ಬಾಲಕೋಟೆಯಲ್ಲಿ 1, ಬೀದರನಲ್ಲಿ 4ಜನರಿಗೆ ಸೋಂಕು ತಗುಲಿದೆ.
ಕೆಲ ದಿನಗಳ ಹಿಂದೆ ಸೋಂಕು ಮುಕ್ತವಾಗಿದ್ದ ಗದಗನಲ್ಲಿ ಈಗ ಮತ್ತೆ ಸೋಂಕು ಉಲ್ಬಣಿಸುತ್ತಿದೆ.
ರಾಜ್ಯದಲ್ಲಿ ಕೆಲ ದಿನಗಳಿಂದ ಅನ್ಯ ರಾಜ್ಯದಿಂದ ಆಗಮಿಸಿರುವ ಜನತೆಯಲ್ಲಿ ಹೆಚ್ಚಾಗಿ ಸೋಂಕು ಕಂಡುಬರುತ್ತಿರುವುದು ಸರಕಾರಕ್ಕೆ ತೆಲೆನೋವಾಗಿದೆ